alex Certify ಶೇ.80 ಕ್ಕೂ ಅಧಿಕ ಮಧುಮೇಹ ರೋಗಿಗಳಲ್ಲಿ ಕೊಲೆಸ್ಟ್ರಾಲ್‌ ಅಸಹಜತೆ; ಅಧ್ಯಯನದಲ್ಲಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೇ.80 ಕ್ಕೂ ಅಧಿಕ ಮಧುಮೇಹ ರೋಗಿಗಳಲ್ಲಿ ಕೊಲೆಸ್ಟ್ರಾಲ್‌ ಅಸಹಜತೆ; ಅಧ್ಯಯನದಲ್ಲಿ ಬಹಿರಂಗ

ಇತ್ತೀಚೆಗೆ ಭಾರತದಲ್ಲಿ ನಡೆದ ಅಧ್ಯಯನದಲ್ಲಿ ಟೈಪ್ 2 ಡಯಾಬಿಟಿಕ್ ಮೆಲಿಟಸ್ ರೋಗಿಗಳಲ್ಲಿ ಹೈ ಡೆನ್ಸಿಟಿ ಲಿಪಿಡ್ – ಕೊಲೆಸ್ಟರಾಲ್ ಪ್ರಮಾಣ ಕಡಿಮೆ ಇದ್ದು, ಈ ಬೆಳವಣಿಗೆ ಹೃದಯರಕ್ತನಾಳದ ಕಾಯಿಲೆಯನ್ನು ಅಭಿವೃದ್ಧಿಪಡಿಸುವ ಹೆಚ್ಚಿನ ಅಪಾಯ ತಂದೊಡ್ಡಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಭಾರತದಲ್ಲಿ ಹೊಸದಾಗಿ ನಡೆದ ಅಧ್ಯಯನದ ಪ್ರಕಾರ 80% ಕ್ಕಿಂತ ಹೆಚ್ಚು ಮಧುಮೇಹ ರೋಗಿಗಳು ಕನಿಷ್ಠ ಕೊಲೆಸ್ಟ್ರಾಲ್ ಅಸಹಜತೆಯನ್ನು ಹೊಂದಿದ್ದಾರೆ ಎಂಬುದು ಗೊತ್ತಾಗಿದೆ.

ಇಂಡಿಯನ್ ಡಯಾಬಿಟಿಸ್ ಸ್ಟಡಿಕೂಡ ಟೈಪ್ 2 ಡಯಾಬಿಟಿಕ್‌ಗೆ ಸಿಲುಕಿದವರಲ್ಲಿ ಶೇ.42ರಷ್ಟು ಮಂದಿ ಹೈಪರ್ ಟೆನ್ಷನ್ ಹೈ ರಿಸ್ಕ್‌ನಲ್ಲಿರುತ್ತಾರೆ. ರೋಗಿಗಳ ಬಾಡಿ ಮಾಸ್ ಇಂಡೆಕ್ಸ್ 27.2 ಎಂದು ದಾಖಲಿಸಲಾಗಿದ್ದು, ಇದು ಮಾರ್ಗಸೂಚಿಗಳ ಪ್ರಕಾರ ಅಧಿಕ ತೂಕ ಎಂದು ವರ್ಗೀಕರಿಸಲಾಗಿದೆ.

ಸಹೋದರಿ ಸಾವಿನ ನೋವಿನಲ್ಲೂ 10ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿ

ಎರಿಸ್ ಲೈಫ್‌ಸೈನ್ಸ್‌ನ ಸಹಕಾರದಲ್ಲಿ 2020-2021 ರ ನಡುವೆ 16 ವೈದ್ಯರಿಂದ ರಾಷ್ಟ್ರವ್ಯಾಪಿ ಅಧ್ಯಯನವನ್ನು 1900 ಕ್ಕೂ ಹೆಚ್ಚು ವೈದ್ಯರ ಸಹಭಾಗಿತ್ವದಲ್ಲಿ ನಡೆಸಲಾಯಿತು. ಭಾರತದ 27 ರಾಜ್ಯಗಳಾದ್ಯಂತ ಸರಾಸರಿ 48 ವರ್ಷ ವಯಸ್ಸಿನ 5080 ರೋಗಿಗಳ ಮಾಹಿತಿ ಆಧರಿಸಲಾಗಿತ್ತು. ಈ ಅಧ್ಯಯನವನ್ನು ಪಬ್ಲಿಕ್ ಲೈಬ್ರರಿ ಆಫ್ ಸೈನ್ಸ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ಪುಣೆಯ ಚೆಲ್ಲರಾಮ್ ಡಯಾಬಿಟಿಸ್ ಇನ್‌ಸ್ಟಿಟ್ಯೂಟ್‌ನ ಸಿಇಒ ಮತ್ತು ಎಂಡೋಕ್ರೈನಾಲಜಿ ಮುಖ್ಯಸ್ಥ ಡಾ. ಎ.ಜಿ. ಉನ್ನಿಕೃಷ್ಣನ್ ಅವರು ವರ್ಚುವಲ್ ಸಂವಾದದಲ್ಲಿ ಸುದ್ದಿಗಾರರಿಗೆ ಈ ಮಾಹಿತಿ ತಿಳಿಸಿದರು.

ಭಾರತದ ಮಧುಮೇಹ ಅಧ್ಯಯನವು, ಭಾರತದಾದ್ಯಂತ ಹೊಸದಾಗಿ ರೋಗನಿರ್ಣಯ ಮಾಡಿದ ಮಧುಮೇಹ ರೋಗಿಗಳಲ್ಲಿ ಹೃದಯರಕ್ತನಾಳದ ಅಪಾಯಕಾರಿ ಅಂಶಗಳನ್ನು ಎತ್ತಿ ತೋರಿಸುವುದರ ಮೇಲೆ ಕೇಂದ್ರೀಕರಿಸಿದೆ ಎಂದರು.

ಚಿಕಿತ್ಸೆಯು ಆಹಾರದ ಬದಲಾವಣೆ ಮಾಡಿಕೊಳ್ಳುವುದು, ದೈಹಿಕ ಚಟುವಟಿಕೆ ಮತ್ತು ಗ್ಲೂಕೋಸ್ ನಿಯಂತ್ರಣದ ಮೇಲೆ ಕೇಂದ್ರೀಕರಿಸಬೇಕು. ಹೆಚ್ಚುವರಿಯಾಗಿ ರಕ್ತದೊತ್ತಡ ನಿಯಂತ್ರಣ ಮತ್ತು ಲಿಪಿಡ್ ನಿರ್ವಹಣೆಯಂತಹ ತಂತ್ರಗಳ ಮೂಲಕ ಹೃದಯರಕ್ತನಾಳದ ಅಪಾಯ ತಂದುಕೊಳ್ಳದಂತೆ ಸಲಹೆ ನೀಡಿದ್ದಾರೆ.

92.5 ಪ್ರತಿಶತ ಮತ್ತು ಒಟ್ಟು ರೋಗಿಗಳಲ್ಲಿ 83.5 ಪ್ರತಿಶತವು ಯಾವುದೇ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಮತ್ತು ಅಧಿಕ ರಕ್ತದೊತ್ತಡದ ಚಿಕಿತ್ಸೆಯನ್ನು ಹೊಂದಿಲ್ಲ. 37.3 ಪ್ರತಿಶತ ರೋಗಿಗಳು ಅಧಿಕ ರಕ್ತದೊತ್ತಡ ಹೊಂದಿದ್ದು, ಅವರೆಲ್ಲ 65 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂಬುದು ಅಧ್ಯಯ‌ನದಲ್ಲಿ ಗೊತ್ತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...