ಡೆಂಗ್ಯೂ ರೋಗಿಗಳು ಅಗಾಧವಾಗಿ ಹೆಚ್ಚಾದ ಕಾರಣ ಉತ್ತರ ಪ್ರದೇಶದ ಫಿರೋಜ಼ಾಬಾದ್ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ 30ಕ್ಕೂ ಅಧಿಕ ರೋಗಿಗಳಿಗೆ ಡ್ರಿಪ್ಸ್ ಹಾಕಿ ಫುಟ್‌ಪಾತ್‌ನಲ್ಲೇ ಚಿಕಿತ್ಸೆ ನೀಡಲಾಗಿದೆ.
ಘಟನೆಯಿಂದ ಎಚ್ಚೆತ್ತ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಆಸ್ಪತ್ರೆಯ ಲೈಸೆನ್ಸ್ ರದ್ದು ಮಾಡಿದ್ದಾರೆ. ಆಸ್ಪತ್ರೆಯನ್ನು ಸೀಲ್ ಮಾಡಲು ಬಂದ ಅಧಿಕಾರಿಗಳ ವಿರುದ್ಧ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ಸಂಬಂಧಿಗಳು ಹಿಡಿಶಾಪ ಹಾಕಿದ್ದಾರೆ.
ಸೆಲ್ಫಿಗೆ ಪೋಸ್ ನೀಡಿ ವೈರಲ್ ಆಗಿದ್ದ ಗೊರಿಲ್ಲಾ ಇನ್ನಿಲ್ಲ
ಆಗಸ್ಟ್‌ನಿಂದ ಆಚೆಗೆ ಡೆಂಗ್ಯೂ ಪ್ರಕರಣಗಳು 4,800 ದಾಟಿರುವ ಕಾರಣ ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲದ ಕಾರಣ ರೋಗಿಗಳ ಸಂಬಂಧಿಕರಿಗೆ ಆಸ್ಪತ್ರೆಗಳನ್ನು ಹುಡುಕುವುದೇ ದೊಡ್ಡ ತಲೆನೋವಾಗಿದೆ.
ಪುರುಷರ ಲೈಂಗಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಾ ಸೋಯಾ……?
ಫುಟ್‌ಪಾತ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿವೆ. ಆಸ್ಪತ್ರೆಯ ಹಾಸಿಗೆಗಳು ಖಾಲಿಯಾದ ಕಾರಣ ರಾಷ್ಟ್ರೀಯ ಹೆದ್ದಾರಿ-2ರ ಫುಟ್‌ಪಾತ್ ಮೇಲೆಯೇ ಹಾಸಿಗೆಗಳ ವ್ಯವಸ್ಥೆಯನ್ನು ಆಸ್ಪತ್ರೆಯ ಆಡಳಿತ ಮಾಡಿದೆ ಎಂದು ಮೂಲಗಳು ತಿಳಿಸಿವೆ.