alex Certify ಸೆಲ್ಫಿಗೆ ಪೋಸ್ ನೀಡಿ ವೈರಲ್ ಆಗಿದ್ದ ಗೊರಿಲ್ಲಾ ಇನ್ನಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಲ್ಫಿಗೆ ಪೋಸ್ ನೀಡಿ ವೈರಲ್ ಆಗಿದ್ದ ಗೊರಿಲ್ಲಾ ಇನ್ನಿಲ್ಲ

2019 ರಲ್ಲಿ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ವಿರುಂಗಾ ರಾಷ್ಟ್ರೀಯ ಉದ್ಯಾನವನದಲ್ಲಿ ಎರಡು ಗೊರಿಲ್ಲಾಗಳು ಇಬ್ಬರು ರೇಂಜರ್‌ಗಳೊಂದಿಗೆ ಸೆಲ್ಫಿಗಾಗಿ ಪೋಸ್ ನೀಡಿದ್ದ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿತ್ತು. ಇದೀಗ ಸೆಲ್ಫಿಯಲ್ಲಿದ್ದ ಒಂದು ಗೊರಿಲ್ಲಾ ದೀರ್ಘಕಾಲದ ಅಸೌಖ್ಯದಿಂದ ಮೃತಪಟ್ಟಿದೆ.

ಅಣಬೆ ಪದಾರ್ಥ ಸೇವಿಸಿ ಒಂದೇ ಕುಟುಂಬದ 12 ಮಂದಿ ಅಸ್ವಸ್ಥ

ಡಿಆರ್‌ಸಿಯ ಸೆಂಕ್‌ವೆಕ್ವೆ ಸೆಂಟರ್‌ನಲ್ಲಿ ಬೆಳೆದ ಎನ್‌ಡಕಾಸಿ ಮತ್ತು ಎಂಡೀಜೆ ಎಂಬ ಹೆಣ್ಣು ಗೊರಿಲ್ಲಾಗಳ ಜೊತೆ ರೇಂಜರ್ ಗಳು ತೆಗೆದಿದ್ದ ಸೆಲ್ಫಿ, ಆನ್‌ಲೈನ್‌ನಲ್ಲಿ ಭಾರಿ ವೈರಲ್ ಆಗಿತ್ತು. ದುರದೃಷ್ಟವಶಾತ್, ದೀರ್ಘಕಾಲದ ಅನಾರೋಗ್ಯದ ನಂತರ ಸೆಪ್ಟೆಂಬರ್ 26 ರಂದು ಎನ್‌ಡಕಾಸ್ಕಿ ಗೊರಿಲ್ಲಾ ತನ್ನ 14ನೇ ವಯಸ್ಸಿನಲ್ಲಿ ಮೃತಪಟ್ಟಿದೆ ಎಂದು ಪಾರ್ಕ್ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಿಳಿಸಿದೆ.

“ಒಂದು ದಶಕಕ್ಕೂ ಹೆಚ್ಚು ಕಾಲ ಪಾರ್ಕ್‌ನ ಸೆಂಕ್‌ವೆಕ್ವೆ ಸೆಂಟರ್‌ನ ಆರೈಕೆಯಲ್ಲಿದ್ದ ಪ್ರೀತಿಯ ಅನಾಥ ಪರ್ವತ ಗೊರಿಲ್ಲಾ, ಎಂಡಕಾಸಿಯ ಸಾವನ್ನು ವಿರುಂಗಾ ದುಃಖದಿಂದ ಘೋಷಿಸಿದೆ” ಎಂದು ಪಾರ್ಕ್ ತಿಳಿಸಿದೆ.

ಹಳೆ ಎಟಿಎಂ ಖರೀದಿಸಿದ್ದ ಯುವಕರಿಗೆ ʼಬಂಪರ್ʼ

“26 ಸೆಪ್ಟೆಂಬರ್ ಸಂಜೆ, ದೀರ್ಘಕಾಲದ ಅನಾರೋಗ್ಯದ ನಂತರ, ಆಕೆಯ ಸ್ಥಿತಿ ಶೀಘ್ರವಾಗಿ ಹದಗೆಟ್ಟಿತು, ಎಂಡಕಾಸಿ ತನ್ನನ್ನು ನೋಡಿಕೊಳ್ಳುತ್ತಿದ್ದ ಮತ್ತು ಜೀವಮಾನದ ಸ್ನೇಹಿತ, ಪ್ರೀತಿಯ ಆಂಡ್ರೆ ಬೌಮಾರ ತೋಳುಗಳಲ್ಲಿ ತನ್ನ ಉಸಿರು ನಿಲ್ಲಿಸಿದೆ” ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.

ಪ್ರಸಿದ್ಧ ಸೆಲ್ಫಿಯಲ್ಲಿ ಕಾಣಿಸಿಕೊಂಡ ಗೋರಿಲ್ಲಾ ತನ್ನ ಆರೈಕೆದಾರ ಆಂಡ್ರೆ ಬೌಮಾ ಅವರ ಎದೆಗೆ ಒರಗಿ ಮಲಗಿರುವ ಹೃದಯ ವಿದ್ರಾವಕ ಫೋಟೋವನ್ನು ಪೋಸ್ಟ್ ನಲ್ಲಿ ಹಂಚಿಕೊಳ್ಳಲಾಗಿದೆ. ನೆಟ್ಟಿಗರು ಕೂಡ ತುಂಬಾ ದುಃಖಿತರಾಗಿ ಪ್ರತಿಕ್ರಿಯಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...