alex Certify ಬೆಂಗಳೂರು: ಒಂದೇ ವಾರದಲ್ಲಿ 2,638 ಮಕ್ಕಳಿಗೆ ಕೋವಿಡ್ ಪಾಸಿಟಿವ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರು: ಒಂದೇ ವಾರದಲ್ಲಿ 2,638 ಮಕ್ಕಳಿಗೆ ಕೋವಿಡ್ ಪಾಸಿಟಿವ್

ಕಳೆದ ಒಂದು ವಾರದಲ್ಲಿ ಬೆಂಗಳೂರಿನಲ್ಲಿ 2,638 ಕೋವಿಡ್ ಕೇಸುಗಳು ಪತ್ತೆಯಾಗಿದ್ದು, ಪ್ರತಿನಿತ್ಯ ಸರಾಸರಿ 375ರಷ್ಟು ಮಕ್ಕಳು ಸೋಂಕಿತರಾಗುತ್ತಿದ್ದಾರೆ ಎಂದು ಕರ್ನಾಟಕ ಆರೋಗ್ಯ ಇಲಾಖೆ ಪ್ರಕಟಿಸಿದ ಅಂಕಿ ಅಂಶಗಳು ತಿಳಿಸಿವೆ.

ಜನವರಿ 1-7ರ ನಡುವೆ 19 ವರ್ಷದೊಳಗಿನ 2,628 ಮಂದಿಗೆ ವೈರಸ್ ದಾಳಿ ಮಾಡಿದೆ. ಇವರ ಪೈಕಿ, 571 ಮಂದಿ 9 ವರ್ಷದ ಒಳಗಿದ್ದಾರೆ.

ಒಮಿಕ್ರೋನ್ ನಿಂದಲೇ ದೇಶದಲ್ಲಿ ಕೊರೊನಾ 3ನೇ ಅಲೆ…! ಕೇಂದ್ರ ಸರ್ಕಾರದಿಂದ ಮಹತ್ವದ ಸೂಚನೆ

ಬಿಬಿಎಂಪಿಯ ವರದಿ ಪ್ರಕಾರ, ಜನವರಿ 7ರಂದು ಒಂದೇ ದಿನ 934 ಮಕ್ಕಳಿಗೆ ಕೋವಿಡ್-19 ಸೋಂಕು ತಗುಲಿದೆ. ಆದರೆ ಮಕ್ಕಳಲ್ಲಿ ಸೋಂಕಿನ ಯಾವುದೇ ರೋಗ ಲಕ್ಷಣಗಳು ಕಂಡು ಬಂದಿಲ್ಲ, ಆದರೂ ಸಹ ಅವರನ್ನು ಮನೆಗಳಲ್ಲೇ ಐಸೋಲೇಟ್ ಮಾಡಲಾಗಿದೆ.

ಮೂರನೇ ಅಲೆಯಲ್ಲಿ ಯಾವುದೇ ಸಾವು ವರದಿಯಾಗಿರದ ಕಾರಣ ಹೆತ್ತವರು ಗಾಬರಿಯಾಗಬೇಕಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ಒಂದು ವಾರದ ಅವಧಿಯಲ್ಲಿ ರಾಜ್ಯದಲ್ಲಿ 24,000ಕ್ಕೂ ಹೆಚ್ಚಿನ ಮಂದಿ ಕೋವಿಡ್ ಪಾಸಿಟಿವ್ ಕಂಡು ಬಂದಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...