ಯಾತ್ರಾರ್ಥಿಗಳ ಗುಂಪಿನ ಮೇಲೆಯೇ ಪಿಕಪ್ ಟ್ರಕ್ ನುಗ್ಗಿದ ಪರಿಣಾಮ 20 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆಯು ಪುಣೆಯ ವಡ್ಗಾಂವ್ ಎಂಬಲ್ಲಿ ಇಂದು ಮುಂಜಾನೆ ಸಂಭವಿಸಿದೆ.
ವಿಠ್ಠಲನ ಭಕ್ತರಾದ ವಾರ್ಕಾರಿಗಳು ಪುಣೆಯಿಂದ ಸುಮಾರು 25 ಕಿಲೊಮೀಟರ್ ದೂರದಲ್ಲಿರುವ ಅಲಂಡಿಗೆ ಪಾದಯಾತ್ರೆ ಕೈಗೊಂಡಿದ್ದರು ಎನ್ನಲಾಗಿದೆ. ದೇವಾಲಯಕ್ಕೆ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಟ್ರಕ್ ಯಾತ್ರಾರ್ಥಿಗಳಿಗೆ ಡಿಕ್ಕಿ ಹೊಡೆದಿದೆ.
ಇನ್ನು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ವಾಡ್ಗಾಂವ್ ಮಾವಲ್ ಪೊಲೀಸ್ ಠಾಣೆ ಅಧಿಕಾರಿ, ಅಪಘಾತದಲ್ಲಿ ಗಾಯಗೊಂಡವರನ್ನು ಆ್ಯಂಬುಲೆನ್ಸ್ ಮೂಲಕ ಹತ್ತಿರದ ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. ಎಲ್ಲರಿಗೂ ಸೂಕ್ತ ಚಿಕಿತ್ಸೆ ಮುಂದುವರಿದಿದೆ. ಇವರಲ್ಲಿ ಆರು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂಬ ಮಾಹಿತಿ ದೊರಕಿದೆ ಎಂದು ಹೇಳಿದರು.
ಅಪಘಾತಕ್ಕೆ ಕಾರಣವಾದ ಪಿಕಪ್ ಟ್ರಕ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿಸಿದ್ದಾರೆ.