alex Certify ವಿಠ್ಠಲನ ದರ್ಶನಕ್ಕೆ ಸಾಗುತ್ತಿದ್ದ ವೇಳೆ ಅವಘಡ: ಪಾದಯಾತ್ರೆ ಕೈಗೊಂಡಿದ್ದ ಯಾತ್ರಾರ್ಥಿಗಳ ಮೇಲೆಯೇ ಹರಿದ ಟ್ರಕ್​​​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಠ್ಠಲನ ದರ್ಶನಕ್ಕೆ ಸಾಗುತ್ತಿದ್ದ ವೇಳೆ ಅವಘಡ: ಪಾದಯಾತ್ರೆ ಕೈಗೊಂಡಿದ್ದ ಯಾತ್ರಾರ್ಥಿಗಳ ಮೇಲೆಯೇ ಹರಿದ ಟ್ರಕ್​​​..!

ಯಾತ್ರಾರ್ಥಿಗಳ ಗುಂಪಿನ ಮೇಲೆಯೇ ಪಿಕಪ್​​ ಟ್ರಕ್​ ನುಗ್ಗಿದ ಪರಿಣಾಮ 20 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆಯು ಪುಣೆಯ ವಡ್ಗಾಂವ್​ ಎಂಬಲ್ಲಿ ಇಂದು ಮುಂಜಾನೆ ಸಂಭವಿಸಿದೆ.

ವಿಠ್ಠಲನ ಭಕ್ತರಾದ ವಾರ್ಕಾರಿಗಳು ಪುಣೆಯಿಂದ ಸುಮಾರು 25 ಕಿಲೊಮೀಟರ್​ ದೂರದಲ್ಲಿರುವ ಅಲಂಡಿಗೆ ಪಾದಯಾತ್ರೆ ಕೈಗೊಂಡಿದ್ದರು ಎನ್ನಲಾಗಿದೆ. ದೇವಾಲಯಕ್ಕೆ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಟ್ರಕ್​ ಯಾತ್ರಾರ್ಥಿಗಳಿಗೆ ಡಿಕ್ಕಿ ಹೊಡೆದಿದೆ.

ಇನ್ನು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ವಾಡ್ಗಾಂವ್​​​ ಮಾವಲ್​ ಪೊಲೀಸ್​ ಠಾಣೆ ಅಧಿಕಾರಿ, ಅಪಘಾತದಲ್ಲಿ ಗಾಯಗೊಂಡವರನ್ನು ಆ್ಯಂಬುಲೆನ್ಸ್​ ಮೂಲಕ ಹತ್ತಿರದ ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. ಎಲ್ಲರಿಗೂ ಸೂಕ್ತ ಚಿಕಿತ್ಸೆ ಮುಂದುವರಿದಿದೆ. ಇವರಲ್ಲಿ ಆರು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂಬ ಮಾಹಿತಿ ದೊರಕಿದೆ ಎಂದು ಹೇಳಿದರು.

ಅಪಘಾತಕ್ಕೆ ಕಾರಣವಾದ ಪಿಕಪ್​ ಟ್ರಕ್​ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...