alex Certify ಪುಟಿನ್ ವಿರುದ್ಧ ಅರೆಸ್ಟ್ ವಾರೆಂಟ್ ಅತಿರೇಕದ್ದು, ಸ್ವೀಕಾರಾರ್ಹವಲ್ಲ: ಐಸಿಸಿಗೆ ರಷ್ಯಾ ತಿರುಗೇಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟಿನ್ ವಿರುದ್ಧ ಅರೆಸ್ಟ್ ವಾರೆಂಟ್ ಅತಿರೇಕದ್ದು, ಸ್ವೀಕಾರಾರ್ಹವಲ್ಲ: ಐಸಿಸಿಗೆ ರಷ್ಯಾ ತಿರುಗೇಟು

ತಮ್ಮ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ಬಂಧನ ವಾರಂಟ್ ಹೊರಡಿಸಿದ್ದಕ್ಕಾಗಿ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವನ್ನು(ಐಸಿಸಿ) ರಷ್ಯಾದ ನಾಯಕರು ಶುಕ್ರವಾರ ತೀವ್ರವಾಗಿ ಟೀಕಿಸಿದ್ದಾರೆ.

ಅಪ್ರಾಪ್ತ ವಯಸ್ಕರ ಅಕ್ರಮ ಗಡೀಪಾರು ಮತ್ತು ಉಕ್ರೇನಿಯನ್ ಪ್ರದೇಶದಿಂದ ರಷ್ಯಾದ ಒಕ್ಕೂಟಕ್ಕೆ ಜನರನ್ನು ಅಕ್ರಮವಾಗಿ ಸಾಗಿಸುವ ಶಂಕೆಯ ಮೇರೆಗೆ ಐಸಿಸಿ ಪುಟಿನ್ ಅವರಿಗೆ ಬಂಧನ ವಾರಂಟ್ ಹೊರಡಿಸಿದೆ.

ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಅವರು ಐಸಿಸಿ ಎತ್ತಿರುವ ಪ್ರಶ್ನೆಗಳು ಅತಿರೇಕದ್ದು ಮತ್ತು ಸ್ವೀಕಾರಾರ್ಹವಲ್ಲ ಎಂದು ಮಾಸ್ಕೋ ಕಂಡುಕೊಂಡಿದೆ. ರಷ್ಯಾ ಇತರ ಹಲವು ದೇಶಗಳಂತೆ ಐಸಿಸಿಯ ನ್ಯಾಯವ್ಯಾಪ್ತಿಯನ್ನು ಗುರುತಿಸಲ್ಲ ಎಂದು ಹೇಳಿದ್ದಾರೆ.

ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾರಿಯಾ ಜಖರೋವಾ ಕೂಡ ಇದೇ ರೀತಿಯ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ನಿರ್ಧಾರಗಳು ಕಾನೂನು ದೃಷ್ಟಿಕೋನದಿಂದ ಸೇರಿದಂತೆ ನಮ್ಮ ದೇಶಕ್ಕೆ ಯಾವುದೇ ಅರ್ಥವಿಲ್ಲ. ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ರೋಮ್ ಶಾಸನಕ್ಕೆ ರಷ್ಯಾ ಬದ್ಧವಲ್ಲ ಮತ್ತು ಅದರ ಅಡಿಯಲ್ಲಿ ಯಾವುದೇ ಬಾಧ್ಯತೆಗಳನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...