alex Certify ಬೆಚ್ಚಿ ಬೀಳಿಸುತ್ತೆ ಜಾಮೀನಿನ ಮೂಲಕ ಹೊರ ಬಂದ ಪಾಪಿ ಎಸಗಿದ ಕೃತ್ಯ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿ ಬೀಳಿಸುತ್ತೆ ಜಾಮೀನಿನ ಮೂಲಕ ಹೊರ ಬಂದ ಪಾಪಿ ಎಸಗಿದ ಕೃತ್ಯ….!

ಒಂದು ತಿಂಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆರೋಪಿ 21 ವರ್ಷದ ದೂರುದಾರ ಯುವತಿಯನ್ನು ಆಕೆಯ ಮನೆಯ ಎದುರೇ ಕೊಲೆಗೈದ ದಾರುಣ ಘಟನೆಯು ಮಧ್ಯ ಪ್ರದೇಶದ ಸಾಗರ ಜಿಲ್ಲೆಯಲ್ಲಿ ನಡೆದಿದೆ.

ಮೂರು ತಿಂಗಳ ಹಿಂದೆ ಮೃತ ಮಹಿಳೆ ಆರೋಪಿಯ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಳು. ಆರೋಪಿಯು ಮದುವೆಯಾಗುವಂತೆ ಪೀಡುಸುತ್ತಿದ್ದಾನೆ ಹಾಗೂ ಪದೇ ಪದೇ ಬೆದರಿಕೆಯೊಡ್ಡುತ್ತಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಳು. ಈ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ಒಂದು ತಿಂಗಳ ಹಿಂದೆ ಆರೋಪಿಯು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಗುರುವಾರ ದೂರುದಾರ ಯುವತಿಯ ಮನೆಗೆ ತೆರಳಿದ ಆತ ಆಕೆಯ ಮನೆ ಆವರಣದಲ್ಲೇ ಕೊಲೆಗೈದಿದ್ದಾನೆ. ಆರೋಪಿಯ ಕೈಯಲ್ಲಿದ್ದ ಬಂದೂಕನ್ನು ಕಸಿಯಲು ಯತ್ನಿಸಿದ ಮೃತ ಯುವತಿಯ ಕುಟುಂಬಸ್ಥರ ಮೇಲೆ ಕಲ್ಲು ಎಸೆದು ಹಲ್ಲೆಗೈದಿದ್ದಾನೆ. ಯುವತಿಯನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯ್ತಾದರೂ ಆಕೆ ಸತ್ತಿದ್ದಾಳೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ಇನ್ನು ಈ ವಿಚಾರವಾಗಿ ಮೃತ ಯುವತಿಯ ಸಹೋದರ ಮಾತನಾಡಿದ್ದು, ನಮ್ಮ ಮನೆಯ ಸಮೀಪದಲ್ಲೇ ವಾಸಿಸುತ್ತಿದ್ದ ಈತನ ಮೇಲೆ ನನ್ನ ಸಹೋದರಿ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದಳು. ತಿಂಗಳ ಹಿಂದಷ್ಟೇ ಜಾಮೀನಿನ ಮೂಲಕ ಹೊರಗೆ ಬಂದಿದ್ದ ಈತ ಇನ್ಮುಂದೆ ಸಹೋದರಿಗೆ ಕಿರುಕುಳ ನೀಡುವುದಿಲ್ಲ ಎಂದೇ ಭಾವಿಸಿದ್ದೆವು. ಆದರೆ ಆತ ಹತ್ಯೆಗೆ ಸ್ಕೆಚ್​ ಹಾಕಿದ್ದ ಎಂಬ ಸಣ್ಣ ಸುಳಿವು ಕೂಡ ನಮಗೆ ಇರಲಿಲ್ಲ ಎಂದು ಹೇಳಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...