ಮುಂಬೈ: ಪೊಲೀಸರನ್ನು ಕಂಡರೆ ಸಾಕು ಹಲವು ಮಂದಿ ಹೆದರುತ್ತಾರೆ. ಯಾಕೆಂದರೆ ಅವರ ಕಾರ್ಯಶೈಲಿಯೇ ಹಾಗಿರುತ್ತದೆ. ಆದರೆ ಮುಂಬೈ ಪೊಲೀಸ್ ಬ್ಯಾಂಡ್ ವಾದನ ತಂಡವು ಸದ್ಯ ಜನರನ್ನು ಆಕರ್ಷಿಸಿದ್ದು, ನೆಟ್ಟಿಗರು ಪೊಲೀಸರ ಬ್ಯಾಂಡ್ ವಾದನಕ್ಕೆ ಮಾರುಹೋಗಿದ್ದಾರೆ.
ಪೊಲೀಸ್ ಬ್ಯಾಂಡ್ ಅಂದ್ರೆ ಹೆಚ್ಚಾಗಿ ದೇಶಭಕ್ತಿಗೀತೆಯನ್ನೇ ನುಡಿಸುತ್ತಾರೆ ಅಂತಾ ಹೇಳಲಾಗುತ್ತೆ. ಆದರೆ ಮುಂಬೈ ಪೊಲೀಸ್ ಪಡೆ ಭಾರತೀಯ ಹಾಡನ್ನೂ ಮೀರಿ ಜೇಮ್ಸ್ ಬಾಂಡ್ ಚಲನಚಿತ್ರಗಳಿಂದ ಆರಿಸಿದ ಹಾಲಿವುಡ್ ಸಂಗೀತವನ್ನು ಪ್ರದರ್ಶಿಸುವ ಮುಖಾಂತರ ಗಮನ ಸೆಳೆದಿದೆ.
2022ರಲ್ಲಿ ಭಾರತದಿಂದ ಕೋವಿಡ್ ಲಸಿಕೆ ರಫ್ತು ಪುನರಾರಂಭ ಸಾಧ್ಯತೆ: ಎನ್.ಕೆ.ಅರೋರಾ
ಮಾಂಟಿ ನಾರ್ಮನ್ ಅವರ ಜೇಮ್ಸ್ ಬಾಂಡ್ ಥೀಮ್ ಗೆ ತಮ್ಮ ಗೌರವ ಸೂಚಿಸಿದೆ. ಕಾನೂನು ಜಾರಿ ಸಂಸ್ಥೆಯು ಪೊಲೀಸ್ ಬ್ಯಾಂಡ್ ನ ಅದ್ಭುತ ಪ್ರದರ್ಶನವನ್ನು ಖಾಕಿ ಸ್ಟುಡಿಯೋದಿಂದ ಹಂಚಿಕೊಂಡಿದೆ. ಕ್ಲಾರಿನೆಟ್ ನಿಂದ ಹಿಡಿದು ಸ್ಯಾಕ್ಸೋಫೋನ್ ವರೆಗೆ 30ಕ್ಕೂ ಹೆಚ್ಚು ಸದಸ್ಯರು ತಮ್ಮ ಅದ್ಭುತ ವಾದನದಿಂದ ಎಲ್ಲರನ್ನೂ ಮೂಕವಿಸ್ಮಿತಗೊಳಿಸಿದ್ದಾರೆ.
ಸದ್ಯ, ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಸಂಚಲವನ್ನೇ ಸೃಷ್ಟಿಸಿದ್ದು, ಪೊಲೀಸ್ ಪಡೆಗೆ ಪ್ರಶಂಸೆಗಳ ಮಹಾಪೂರವನ್ನೇ ಹರಿಸಿದ್ದಾರೆ. “ಗಣೇಶ ಉತ್ಸವಕ್ಕಾಗಿ ಬುಕ್ಕಿಂಗ್ ಮಾಡಬೇಕಾಗಿದೆ. ಭದ್ರತೆ ಹಾಗೂ ಬ್ಯಾಂಡ್, ಇವು ಎರಡನ್ನೂ ಒಟ್ಟಿಗೆ ಸಾಧ್ಯವಾಗಿಸಿತು” ಎಂದು ಒಬ್ಬರು ಇನ್ಸ್ಟಾಗ್ರಾಂನಲ್ಲಿ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು “ಮುಂಬೈ ಪೊಲೀಸರಿಗೆ ಬ್ಯಾಂಡ್ ನುಡಿಸುವುದು/ನಿಮಗೆ ಪಾಠ ಕಲಿಸುವುದು ಹೇಗೆ ಎಂದು ತಿಳಿದಿದೆ” ಅಂತಾ ಹಾಸ್ಯ ಚಟಾಕಿ ಹಾರಿಸಿದ್ದಾರೆ.