ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಬೆಂಗಾವಲು ವಾಹನದ ಮೇಲೆ ಹಲ್ಲೆ ನಡೆಸಿದ ಪ್ರಕರಣ ನಡೆಸಿದ ಸಂಬಂಧ ಬಿಜೆಪಿ ಸಂಸದೆ ರೂಪಾ ಗಂಗೂಲಿ ಮಮತಾ ಬ್ಯಾನರ್ಜಿ ವಿರುದ್ಧ ಹರಿಹಾಯ್ದಿದ್ದಾರೆ. ಟಿಎಂಸಿ ಪಶ್ಚಿಮ ಬಂಗಾಳದಲ್ಲಿ ಸಂಘಟಿತ ಅಪರಾಧ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
ಕೇವಲ 7 ಮಂದಿ ಸೇರಿಕೊಂಡು ನಡ್ಡಾ ಅವರ ವಾಹನದ ಮೇಲೆ ದಾಳಿ ಮಾಡೋಕೆ ಸಾಧ್ಯವಿದೆಯೇ..? ಇವರೆಲ್ಲ ನಮ್ಮನ್ನ ಮೂರ್ಖರು ಎಂದು ಭಾವಿಸಿದ್ದಾರೆ. ನಾವು ಇದರ ಇತಿಹಾಸವನ್ನ ಕೆದಕಿ ನೋಡಬೇಕಿದೆ. ಗೃಹ ಸಚಿವಾಲಯ ಘಟನೆಗೆ ಕಾರಣ ಕೇಳಿ ಪತ್ರ ಕಳುಹಿಸಿದೆ. ಹೀಗಾಗಿ ಇವರು 7 ಮಂದಿಯನ್ನ ಬಂಧಿಸಿ ನಾಟಕವಾಡಿದ್ದಾರೆ ಎಂದು ಹೇಳಿದ್ದಾರೆ.