ನಿಮ್ಮ ಸೂಕ್ಷ್ಮ ದೃಷ್ಟಿಗೊಂದು ಗಂಭೀರ ಸವಾಲೆಸೆಯಬೇಕೆಂದು ಅನಿಸಿದಲ್ಲಿ ದೃಷ್ಟಿ ಭ್ರಮಣಾ ಚಿತ್ರಗಳನ್ನು ಆಗಾಗ ಗಮನಿಸುತ್ತಿರಿ. ಅವು ಕೇವಲ ನಿಮ್ಮ ಮೆದುಳಿನ ಕಿಟಕಿಗಳನ್ನು ತೆರೆಯುವುದು ಮಾತ್ರವಲ್ಲ, ಸಮಸ್ಯೆಗಳನ್ನು ಬಗೆಹರಿಸುವ ನಿಮ್ಮ ಕ್ಷಮತೆಯನ್ನೂ ಸಹ ವೃದ್ಧಿಸುತ್ತವೆ.
ಸಾಮಾಜಿಕ ಜಾಲತಾಣದ ಅನೇಕ ತಾಣಗಳಲ್ಲಿ ಈ ದೃಷ್ಟಿ ಭ್ರಮಣೆಯ ಚಿತ್ರಗಳು ಬಹಳಷ್ಟು ಸಿಗುತ್ತವೆ. ಕೆಲವೊಂದು ದಿನಪತ್ರಿಕೆಗಳೂ ಸಹ ಈ ರೀತಿಯ ಚಿತ್ರಗಳನ್ನು ತಮ್ಮ ಓದುಗರಿಗೆ ಪ್ರಕಟಿಸುತ್ತವೆ. ಈ ದೃಷ್ಟಿಭ್ರಮಣೆಗಳನ್ನು ಭೇದಿಸುವ ಮೂಲಕ ನೀವು ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸಬಹುದಾಗಿದೆ.
ಕೆಲವೊಮ್ಮೆ ಈ ದೃಷ್ಟಿಭ್ರಮಣೆಗಳು ನಿಮ್ಮ ಕಣ್ಣುಗಳಿಗೆ ಬಹಳ ಸರಳವೆನಿಸಿದರೂ ಸಹ ಒಮ್ಮೆ ಅವುಗಳ ಒಳಹೊಕ್ಕಲ್ಲಿ ನಿಮಗೆ ಅವು ಬಹಳ ಸವಾಲೆನಿಸಬಹುದಾಗಿದೆ.
ಇಂಥದ್ದೇ ಒಂದು ದೃಷ್ಟಿಭ್ರಮಣೆಯ ಚಿತ್ರವೊಂದು ನಿಮ್ಮ ತಲೆಗೆ ಸಾಕಷ್ಟು ಕೆಲಸ ಕೊಡಲಿದೆ. ವನ್ಯಜೀವಿ ಛಾಯಾಗ್ರಾಹಕ ಆರ್ಟ್ ವೋಲ್ಫೆ ಈ ಚಿತ್ರವನ್ನು ಶೇರ್ ಮಾಡಿದ್ದಾರೆ. ’ವ್ಯಾನಿಶಿಂಗ್ ಆಕ್ಟ್’ ಹೆಸರಿನಡಿ ಪ್ರಕಟಿಸಲಾದ ಈ ಚಿತ್ರವು ನಿಮ್ಮ ಮನಸ್ಸಿಗೆ ಮುದಗೊಳಿಸಿ, ಕಣ್ಣುಗಳಿಗೆ ಕಠಿಣ ಸವಾಲನ್ನು ನೀಡಬಲ್ಲದಾಗಿದೆ.
ವಿವಿಧ ಗಾತ್ರದ ಸಾಕಷ್ಟು ಕಲ್ಲುಗಳ ನಡುವೆ ಅಮೆರಿಕನ್ ಪಿಕಾ ಹೆಸರಿನ ಪ್ರಾಣಿಯೊಂದು ಕುಳಿತುಕೊಂಡಿದ್ದು, ಆ ಕಲ್ಲುಗಳ ಬಣ್ಣದ್ದೇ ಆಗಿರುವ ಅಮೆರಿಕನ್ ಪಿಕಾವನ್ನು ಪತ್ತೆ ಮಾಡುವುದೇ ಈ ದೃಷ್ಟಿಭ್ರಮಣೆಯ ಚಿತ್ರದಲ್ಲಿನ ದೊಡ್ಡ ಸವಾಲಾಗಿದೆ.