alex Certify ಮಹಿಳೆಗೆ ಮೂರು ಕಾಲಿರುವಂತೆ ತೋರಿಸುತ್ತಿದೆ ಈ ಆಪ್ಟಿಕಲ್​ ಇಲ್ಯೂಷನ್‌ ಫೋಟೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಗೆ ಮೂರು ಕಾಲಿರುವಂತೆ ತೋರಿಸುತ್ತಿದೆ ಈ ಆಪ್ಟಿಕಲ್​ ಇಲ್ಯೂಷನ್‌ ಫೋಟೋ…!

ಸಾಮಾಜಿಕ ಜಾಲತಾಣದಲ್ಲಿ ಆಗಿಂದಾಗ್ಗೆ ಆಪ್ಟಿಕಲ್​ ಇಲ್ಯೂಷನ್​ ಚಿತ್ರಗಳು ಮುನ್ನೆಲೆಗೆ ಬರುತ್ತವೆ. ಕಾಡಿನಲ್ಲಿ ಪ್ರಾಣಿಗಳನ್ನು ಹುಡುಕುವುದು, ಕಟ್ಟಡದಲ್ಲಿ ಅಪರೂಪದ ವಸ್ತು ಹುಡುಕುವ ಬಹಿರಂಗ ಟಾಸ್ಕ್​ಗಳು ನೀಡುವ ಉದಾಹರಣೆ ಸಾಕಷ್ಟಿವೆ.

ಇದೀಗ ಬಂದಿರುವ ಹೊಸ ಆಪ್ಟಿಕಲ್​ ಇಲ್ಯೂಷನ್​ ಫೋಟೋದಲ್ಲಿ ಮೂರು ಕಾಲುಗಳನ್ನು ಹೊಂದಿರುವಂತೆ ಕಂಡುಬರುವ ವಿಮಾನ ನಿಲ್ದಾಣದಲ್ಲಿ ಕುಳಿತಿರುವ ಮಹಿಳೆಯನ್ನು ಕಾಣಬಹುದು. ನಿಜವಾಗಿ ಅಲ್ಲಿ ಏಕೆ ಆ ರೀತಿ ಕಾಣುತ್ತದೆ ಎಂಬುದನ್ನು ತೀವ್ರವಾಗಿ ನೋಡಬೇಕಾಗುತ್ತದೆ.

ಮೂರು ಕಾಲುಗಳನ್ನು ಹೊಂದಿರುವ ಮಹಿಳೆಯನ್ನು ತೋರಿಸುವ ಈ ಚಿತ್ರವು ಕಾಕತಾಳೀಯವಷ್ಟೇ. ತಾನು ಧರಿಸಿದ್ದ ಜೀನ್ಸ್​ ಮತ್ತು ಅದೇ ರೀತಿ ಶೂ ಹೊಂದಿರುವ ಇನ್ನೊಬ್ಬ ವ್ಯಕ್ತಿಯೊಂದಿಗೆ ಮಹಿಳೆ ಕುಳಿತಿದ್ದಾಳೆ. ಆಕೆಯ ಪಕ್ಕದಲ್ಲಿ ಕುಳಿತಿರುವ ವ್ಯಕ್ತಿಯನ್ನು ಮರೆಮಾಚುವ ಕೋನದಿಂದ ಚಿತ್ರವನ್ನು ಕ್ಲಿಕ್​ ಮಾಡಲಾಗಿದೆ.

ಆಸನದ ಬದಿಯಲ್ಲಿ ಆಕೆ ಕಾಲ ಮೇಲೆ ಕಾಲು ಹಾಕಿ ಕುಳಿತಿದ್ದಾಳೆ, ಅವಳ ಪಕ್ಕ ಕುಳಿತಿರುವಾಕೆ ಎರಡೂ ಕಾಲುಗಳನ್ನು ನೆಲದ ಮೇಲೆ ಇಟ್ಟು ಕುಳಿತಿದ್ದಾಳೆ. ಆಪ್ಟಿಕಲ್​ ಇಲ್ಯೂಷನ್​ ಸೃಷ್ಟಿಸಲು ಚಿತ್ರದಲ್ಲಿ ಮೂರು ಕಾಲಿರುವಂತೆ ಕಾಣಿಸುತ್ತದೆ.

ಜಾಲತಾಣದಲ್ಲಿ ಹಂಚಿಕೊಂಡ ನಂತರ ಈ ಫೋಟೋ ಸಾವಿರಾರು ಸಂಖ್ಯೆಯಲ್ಲಿ ವೀಕ್ಷಣೆಯಾಗಿದೆ. ನೂರಾರು ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ.

ಈ ವರ್ಷದ ಆರಂಭದಲ್ಲಿ ವೈರಲ್​ ಆಗಿದ್ದ ಇದೇ ರೀತಿಯ ಫೋಟೋ ನೆಟ್ಟಿಗರನ್ನು ಅಷ್ಟೇ ದಿಗ್ಭ್ರಮೆಗೊಳಿಸಿತ್ತು. ಮಹಿಳೆಯೊಬ್ಬರು ಹಾಸಿಗೆಯ ಮೇಲೆ ಕುಳಿತಿರುವುದನ್ನು ತೋರಿಸುವ ಫೋಟೋದಲ್ಲಿ ಮೂರು ಕಾಲುಗಳನ್ನು ಹೊಂದಿರುವಂತೆ ತೋರುತ್ತಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...