ಸಾಮಾಜಿಕ ಜಾಲತಾಣದಲ್ಲಿ ಆಗಿಂದಾಗ್ಗೆ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಮುನ್ನೆಲೆಗೆ ಬರುತ್ತವೆ. ಕಾಡಿನಲ್ಲಿ ಪ್ರಾಣಿಗಳನ್ನು ಹುಡುಕುವುದು, ಕಟ್ಟಡದಲ್ಲಿ ಅಪರೂಪದ ವಸ್ತು ಹುಡುಕುವ ಬಹಿರಂಗ ಟಾಸ್ಕ್ಗಳು ನೀಡುವ ಉದಾಹರಣೆ ಸಾಕಷ್ಟಿವೆ.
ಇದೀಗ ಬಂದಿರುವ ಹೊಸ ಆಪ್ಟಿಕಲ್ ಇಲ್ಯೂಷನ್ ಫೋಟೋದಲ್ಲಿ ಮೂರು ಕಾಲುಗಳನ್ನು ಹೊಂದಿರುವಂತೆ ಕಂಡುಬರುವ ವಿಮಾನ ನಿಲ್ದಾಣದಲ್ಲಿ ಕುಳಿತಿರುವ ಮಹಿಳೆಯನ್ನು ಕಾಣಬಹುದು. ನಿಜವಾಗಿ ಅಲ್ಲಿ ಏಕೆ ಆ ರೀತಿ ಕಾಣುತ್ತದೆ ಎಂಬುದನ್ನು ತೀವ್ರವಾಗಿ ನೋಡಬೇಕಾಗುತ್ತದೆ.
ಮೂರು ಕಾಲುಗಳನ್ನು ಹೊಂದಿರುವ ಮಹಿಳೆಯನ್ನು ತೋರಿಸುವ ಈ ಚಿತ್ರವು ಕಾಕತಾಳೀಯವಷ್ಟೇ. ತಾನು ಧರಿಸಿದ್ದ ಜೀನ್ಸ್ ಮತ್ತು ಅದೇ ರೀತಿ ಶೂ ಹೊಂದಿರುವ ಇನ್ನೊಬ್ಬ ವ್ಯಕ್ತಿಯೊಂದಿಗೆ ಮಹಿಳೆ ಕುಳಿತಿದ್ದಾಳೆ. ಆಕೆಯ ಪಕ್ಕದಲ್ಲಿ ಕುಳಿತಿರುವ ವ್ಯಕ್ತಿಯನ್ನು ಮರೆಮಾಚುವ ಕೋನದಿಂದ ಚಿತ್ರವನ್ನು ಕ್ಲಿಕ್ ಮಾಡಲಾಗಿದೆ.
ಆಸನದ ಬದಿಯಲ್ಲಿ ಆಕೆ ಕಾಲ ಮೇಲೆ ಕಾಲು ಹಾಕಿ ಕುಳಿತಿದ್ದಾಳೆ, ಅವಳ ಪಕ್ಕ ಕುಳಿತಿರುವಾಕೆ ಎರಡೂ ಕಾಲುಗಳನ್ನು ನೆಲದ ಮೇಲೆ ಇಟ್ಟು ಕುಳಿತಿದ್ದಾಳೆ. ಆಪ್ಟಿಕಲ್ ಇಲ್ಯೂಷನ್ ಸೃಷ್ಟಿಸಲು ಚಿತ್ರದಲ್ಲಿ ಮೂರು ಕಾಲಿರುವಂತೆ ಕಾಣಿಸುತ್ತದೆ.
ಜಾಲತಾಣದಲ್ಲಿ ಹಂಚಿಕೊಂಡ ನಂತರ ಈ ಫೋಟೋ ಸಾವಿರಾರು ಸಂಖ್ಯೆಯಲ್ಲಿ ವೀಕ್ಷಣೆಯಾಗಿದೆ. ನೂರಾರು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಈ ವರ್ಷದ ಆರಂಭದಲ್ಲಿ ವೈರಲ್ ಆಗಿದ್ದ ಇದೇ ರೀತಿಯ ಫೋಟೋ ನೆಟ್ಟಿಗರನ್ನು ಅಷ್ಟೇ ದಿಗ್ಭ್ರಮೆಗೊಳಿಸಿತ್ತು. ಮಹಿಳೆಯೊಬ್ಬರು ಹಾಸಿಗೆಯ ಮೇಲೆ ಕುಳಿತಿರುವುದನ್ನು ತೋರಿಸುವ ಫೋಟೋದಲ್ಲಿ ಮೂರು ಕಾಲುಗಳನ್ನು ಹೊಂದಿರುವಂತೆ ತೋರುತ್ತಿತ್ತು.