alex Certify ಈ ಒಂದು ಚಿತ್ರದಲ್ಲಿರುವ ನಾಲ್ಕು ಮಹಿಳೆಯರ ಮುಖ ಗುರುತಿಸಬಲ್ಲಿರಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಒಂದು ಚಿತ್ರದಲ್ಲಿರುವ ನಾಲ್ಕು ಮಹಿಳೆಯರ ಮುಖ ಗುರುತಿಸಬಲ್ಲಿರಾ….?

ಆಪ್ಟಿಕಲ್​ ಇಲ್ಯೂಷನ್​ ಚಿತ್ರಗಳು ಜಾಲತಾಣದಲ್ಲಿ ವೈರಲ್​ ಆಗುತ್ತವೆ. ಗುರುತು ಹಿಡಿಯುವ ಸವಾಲು ಹಾಕುವ ಚಿತ್ರಗಳನ್ನು ಒಂದಷ್ಟು ಮಂದಿ ಇಷ್ಟಪಟ್ಟು ತಲೆಕೆಡಿಸಿಕೊಂಡು ಹುಡುಕುತ್ತಾರೆ ಕೂಡ. ಸಾಮಾನ್ಯವಾಗಿ, ಇಂತಹ ಚಟುವಟಿಕೆ ಮೆದುಳಿನ ವಿಕಸನಕ್ಕೆ ಸಹಾಯ ಮಾಡಲು ಬಳಸಲಾಗುತ್ತದೆ.

ಇತ್ತೀಚೆಗೆ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಈ ಚಿತ್ರದಲ್ಲಿ, ಮಹಿಳೆಯರ ನಾಲ್ಕು ಬಗೆಯ ವಿಭಿನ್ನ ಮುಖಗಳನ್ನು ಕಂಡುಹಿಡಿಯಬೇಕು, ಅಂಥದ್ದೊಂದು ಕಲೆ ಅನಾವರಣಗೊಂಡಿದೆ. ಇದನ್ನು ರಚಿಸಿದವರು ಮಹಿಳೆಯರ ಚಿತ್ರಗಳನ್ನು ಒಂದರೊಳಗೊಂದು ಮರೆಮಾಡಿದ್ದಾರೆ. ಮೊದಲ ನೋಟದಲ್ಲಿ, ನೀವು ಇಬ್ಬರನ್ನು ಗುರುತಿಸಬಹುದು, ಎರಡನೇಯದನ್ನೂ ಕಷ್ಟ ಪಟ್ಟು ಗುರುತಿಸಬಹುದು. ಆದರೆ ಮುಂದುವರೆದಂತೆ ಅದು ಕಷ್ಟಕರವಾಗುತ್ತದೆ.

ಈ ಚಿತ್ರವನ್ನು ಉಕ್ರೇನಿಯನ್​ ಕಲಾವಿದ ಒಲೆಗ್​ ಶುಪ್ಲಿಯಾಕ್​ ಮಾಡಿದ್ದಾರೆ. ಈ ಹಿಂದೆ ಈ ಸವಾಲನ್ನು ಸ್ವೀಕರಿಸಿದ ಕೆಲವರು, ಮೊದಲ ಮೂರು ಮುಖಗಳನ್ನು ಗುರುತಿಸುವುದು ಸುಲಭ ಆದರೆ ನಾಲ್ಕನೆಯದಕ್ಕೆ, ವೀಕ್ಷಕರು ಹೆಚ್ಚು ಗಮನ ಹರಿಸಬೇಕಾಗುತ್ತದೆ ಎಂದು ಸಲಹೆ ನೀಡುತ್ತಾರೆ,

ಮೊದಲ ನೋಟದಲ್ಲಿ, ಒಬ್ಬ ಮಹಿಳೆ ಒರಗಿಕೊಂಡು ಫೋನ್​ನಲ್ಲಿ ಮಾತನಾಡುವುದನ್ನು ನೋಡಬಹುದು. ಎರಡನೇ ಮಹಿಳೆಯ ಕೂದಲನ್ನು ಬಹಿರಂಗಪಡಿಸುತ್ತದೆ. ಮೂರನೇ ಮುಖವನ್ನು ಮಹಿಳೆ ಕೈಯ ಹಿಂದೆ ನೋಡಬೇಕು. ಮಹಿಳೆಯ ನಾಲ್ಕನೇ ಮುಖವನ್ನು ನೀವು ಗುರುತಿಸಬಹುದೇ?

ಒಂದು ಕ್ಲೂ ಎಂದರೆ, ನಾಲ್ಕನೇ ಮಹಿಳೆಯ ಮುಚ್ಚಿದ ಕಣ್ಣುರೆಪ್ಪೆಗಳನ್ನು ನೀವು ಗುರುತಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...