ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಜಾಲತಾಣದಲ್ಲಿ ವೈರಲ್ ಆಗುತ್ತವೆ. ಗುರುತು ಹಿಡಿಯುವ ಸವಾಲು ಹಾಕುವ ಚಿತ್ರಗಳನ್ನು ಒಂದಷ್ಟು ಮಂದಿ ಇಷ್ಟಪಟ್ಟು ತಲೆಕೆಡಿಸಿಕೊಂಡು ಹುಡುಕುತ್ತಾರೆ ಕೂಡ. ಸಾಮಾನ್ಯವಾಗಿ, ಇಂತಹ ಚಟುವಟಿಕೆ ಮೆದುಳಿನ ವಿಕಸನಕ್ಕೆ ಸಹಾಯ ಮಾಡಲು ಬಳಸಲಾಗುತ್ತದೆ.
ಇತ್ತೀಚೆಗೆ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಈ ಚಿತ್ರದಲ್ಲಿ, ಮಹಿಳೆಯರ ನಾಲ್ಕು ಬಗೆಯ ವಿಭಿನ್ನ ಮುಖಗಳನ್ನು ಕಂಡುಹಿಡಿಯಬೇಕು, ಅಂಥದ್ದೊಂದು ಕಲೆ ಅನಾವರಣಗೊಂಡಿದೆ. ಇದನ್ನು ರಚಿಸಿದವರು ಮಹಿಳೆಯರ ಚಿತ್ರಗಳನ್ನು ಒಂದರೊಳಗೊಂದು ಮರೆಮಾಡಿದ್ದಾರೆ. ಮೊದಲ ನೋಟದಲ್ಲಿ, ನೀವು ಇಬ್ಬರನ್ನು ಗುರುತಿಸಬಹುದು, ಎರಡನೇಯದನ್ನೂ ಕಷ್ಟ ಪಟ್ಟು ಗುರುತಿಸಬಹುದು. ಆದರೆ ಮುಂದುವರೆದಂತೆ ಅದು ಕಷ್ಟಕರವಾಗುತ್ತದೆ.
ಈ ಚಿತ್ರವನ್ನು ಉಕ್ರೇನಿಯನ್ ಕಲಾವಿದ ಒಲೆಗ್ ಶುಪ್ಲಿಯಾಕ್ ಮಾಡಿದ್ದಾರೆ. ಈ ಹಿಂದೆ ಈ ಸವಾಲನ್ನು ಸ್ವೀಕರಿಸಿದ ಕೆಲವರು, ಮೊದಲ ಮೂರು ಮುಖಗಳನ್ನು ಗುರುತಿಸುವುದು ಸುಲಭ ಆದರೆ ನಾಲ್ಕನೆಯದಕ್ಕೆ, ವೀಕ್ಷಕರು ಹೆಚ್ಚು ಗಮನ ಹರಿಸಬೇಕಾಗುತ್ತದೆ ಎಂದು ಸಲಹೆ ನೀಡುತ್ತಾರೆ,
ಮೊದಲ ನೋಟದಲ್ಲಿ, ಒಬ್ಬ ಮಹಿಳೆ ಒರಗಿಕೊಂಡು ಫೋನ್ನಲ್ಲಿ ಮಾತನಾಡುವುದನ್ನು ನೋಡಬಹುದು. ಎರಡನೇ ಮಹಿಳೆಯ ಕೂದಲನ್ನು ಬಹಿರಂಗಪಡಿಸುತ್ತದೆ. ಮೂರನೇ ಮುಖವನ್ನು ಮಹಿಳೆ ಕೈಯ ಹಿಂದೆ ನೋಡಬೇಕು. ಮಹಿಳೆಯ ನಾಲ್ಕನೇ ಮುಖವನ್ನು ನೀವು ಗುರುತಿಸಬಹುದೇ?
ಒಂದು ಕ್ಲೂ ಎಂದರೆ, ನಾಲ್ಕನೇ ಮಹಿಳೆಯ ಮುಚ್ಚಿದ ಕಣ್ಣುರೆಪ್ಪೆಗಳನ್ನು ನೀವು ಗುರುತಿಸಬಹುದು.