ಜನರ ಮನಸ್ಸನ್ನು ಹಿಡಿದಿಡಲು ಅಥವಾ ಕೇಂದ್ರೀಕರಿಸಲು ಆಪ್ಟಿಕಲ್ ಇಲ್ಯೂಷನ್ ಸಹಕಾರಿ. ಇದು ವೀಕ್ಷಣಾ ಕೌಶಲ್ಯವನ್ನು ಪರೀಕ್ಷಿಸಲು ಅನುಕೂಲವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹೆಚ್ಚೆಚ್ಚು ಇಂತಹ ಚಿತ್ರಗಳು ಹರಿದು ಬರುತ್ತಿರುತ್ತದೆ.
ಇದೀಗ ಬಂದಿರುವ ಆಪ್ಟಿಕಲ್ ಇಲ್ಯೂಷನ್ನಲ್ಲಿ ಕಾಡಿನಲ್ಲಿ ಅಡಗಿರುವ ಜಿರಾಫೆಯನ್ನು ಹುಡುಕಬೇಕಾಗಿದೆ. ಈ ಜಿರಾಫೆಯನ್ನು ಹುಡುಕಲು 20 ಸೆಕೆಂಡ್ಗಳ ನಿಗದಿತ ಸಮಯದ ಮಿತಿಯೂ ಇದೆ.
ಸುತ್ತಲೂ ಸಾಕಷ್ಟು ಮರಗಳು ಮತ್ತು ಹುಲ್ಲಿನ ಕಾಡುಗಳನ್ನು ನೀವು ಗಮನಿಸಬಹುದು. ಈ ಹಸಿರಿನ ನಡುವೆ ಅಡಗಿರುವ ಜಿರಾಫೆಯನ್ನು ಕಂಡುಹಿಡಿಯುವುದು ಅಸಾಧ್ಯವೇನಲ್ಲ, ಆದರೂ ಒಂದಷ್ಟು ಪ್ರಯತ್ನ ಬೇಕಾಗುತ್ತದೆ. ಕೆಲವು ಸುಳಿವುಗಳು ಈ ಕೆಲಸವನ್ನು ಸ್ವಲ್ಪ ಸುಲಭಗೊಳಿಸಬಹುದು.
ಜಿರಾಫೆಯು ಮರದ ಹಿಂದೆ ನಿಂತಿದೆ ಎಂಬುದು ಮೊದಲ ಸುಳಿವಾಗಿದೆ. ಅದರ ಕತ್ತಿನ ಉದ್ದವು ಮರಕ್ಕಿಂತ ಉದ್ದವಾಗಿದೆ. ಜಿರಾಫೆಯನ್ನು ಸುಲಭವಾಗಿ ಪತ್ತೆಹಚ್ಚಲು ಸಹಾಯ ಮಾಡುವ ದೊಡ್ಡ ಸುಳಿವುಗಳಲ್ಲಿ ಒಂದಾಗಿದೆ.
ಹುಡುಕಾಟ ಕಷ್ಟವಾಗಿದ್ದರೆ ಇನ್ನೊಂದು ಸುಳಿವಾಗಿ, ಚಿತ್ರದ ಕಾರ್ನರ್ನಲ್ಲಿ ಜಿರಾಫೆಯನ್ನು ಕಾಣಬಹುದು. ಮರದ ಒಂದು ಭಾಗಕ್ಕೆ ಹೋಲಿಕೆಯನ್ನು ನೀಡುವ ಟ್ರಿಕಿ ರೀತಿಯಲ್ಲಿ ಇರಿಸಲಾಗಿದೆ.