ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಆಟಗಳು ಭಾರಿ ಪ್ರಸಿದ್ಧಿಯಾಗಿವೆ. ಅವುಗಳಲ್ಲಿ ಒಂದು ಆಪ್ಟಿಕಲ್ ಇಲ್ಯೂಷನ್. ಅಂಥದ್ದೇ ಒಂದು ಫೋಟೋ ನೆಟ್ಟಿಗರಿಗೆ ಚಾಲೆಂಜ್ ಕೊಟ್ಟಿದೆ. ಈ ಚಿತ್ರ ಭಾರಿ ವೈರಲ್ ಆಗುತ್ತಿದ್ದು, ಜನರ ತಲೆ ಕೆಡಿಸುವಂತಿದೆ.
ಈ ಚಿತ್ರದಲ್ಲಿ ಪುಟ್ಟ ಬಾಲಕನೊಬ್ಬನ ಕೊಠಡಿಯಲ್ಲಿ ಹಲವಾರು ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡು ಬಿದ್ದಿವೆ. ಅವೆಲ್ಲವೂ ಬಾಲಕನ ಆಟದ ಸಾಮಾನುಗಳು. ಬಾಲಕ ಈ ಚಿತ್ರದಲ್ಲಿ ಚಿಂತಾಕ್ರಾಂತನಾಗಿರುವುದನ್ನು ನೋಡಬಹುದು. ಇದಕ್ಕೆ ಕಾರಣ ಆತನ ಒಂದು ಶೂಸ್ ಈ ಚೆಲ್ಲಾಪಿಲ್ಲಿಯಾಗಿರುವ ವಸ್ತುಗಳ ನಡುವೆ ಕಳೆದುಹೋಗಿದೆ.
ಈಗ ನೀವು ಮಾಡಬೇಕಿರುವುದು ಇಷ್ಟೇ. ಬಾಲಕನ ಒಂದು ಕಾಲಿನಲ್ಲಿ ಶೂಸ್ ಇದೆ. ಇನ್ನೊಂದು ಕಳೆದುಹೋಗಿದೆ. ಕಾಲಿನಲ್ಲಿ ಇರುವ ಶೂಸ್ ರೀತಿಯದ್ದೇ ಇರುವ ಇನ್ನೊಂದು ಶೂಸ್ ಅನ್ನು ನೀವು ಚಿತ್ರದಲ್ಲಿ ಹುಡುಕಿಕೊಡಬೇಕಿದೆ. ಇದು ನಿಮಗಿರುವ ಸವಾಲು. ಇದು ತುಂಬಾ ಈಸಿ ಎನಿಸಿದರೂ ಹುಡುಕುವುದು ಅಷ್ಟು ಸುಲಭವಲ್ಲ.
ನೀಲಿ ಮತ್ತು ಹಸಿರು ಬಣ್ಣದ ಇನ್ನೊಂದು ಶೂಸ್ ಎಲ್ಲಿ ಅಡಗಿದೆ ಎಂದು 10 ಸೆಕೆಂಡ್ನಲ್ಲಿ ಹುಡುಕಿದರೆ ನೀವೇ ಗ್ರೇಟ್. ಸಿಗಲಿಲ್ವಾ? ಇಲ್ಲಿದೆ ನೋಡಿ ಉತ್ತರ.