ನಿಮ್ಮ ಬಾಯನ್ನು ಎಷ್ಟು ಅಗಲಕ್ಕೆ ತೆರೆಯಬಲ್ಲಿರಿ ? ನಿಮ್ಮ ಬಾಯಲ್ಲಿ ಟೆನಿಸ್ ಬಾಲ್, ಸೋಡಾ ಕ್ಯಾನ್ನಂಥ ವಸ್ತುಗಳನ್ನು ಫಿಟ್ ಮಾಡಿಕೊಳ್ಳಬಲ್ಲಿರಾ ?
ಐಸಾಕ್ ಜಾನ್ಸನ್ ಎಂಬ ಅಮೆರಿಕದ ಯುವಕನೊಬ್ಬ ತಮ್ಮ ಬಾಯನ್ನು 10.175 ಸೆಂಮೀಗಳಷ್ಟು ಅಗಲಕ್ಕೆ ತೆರೆದು ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾನೆ.
18,000 ರೂ.ಗೆ ದೈತ್ಯ ಶಂಖದ ಹುಳು ಹರಾಜು
ಜರ್ಮನಿಯ ಬರ್ನ್ಡ್ ಶ್ಮಿಡ್ಟ್ ತನ್ನ ಬಾಯನ್ನು 8.8 ಸೆಂಮೀ ಅಗಲಿಸಿ ವಿಶ್ವ ದಾಖಲೆ ನಿರ್ಮಿಸಿದ್ದನ್ನು ಕಂಡು ತನಗೂ ಸಹ ಹಾಗೆ ಮಾಡುವ ಮನಸ್ಸು ಬಂದಿತ್ತು ಎಂದು ಹೇಳಿಕೊಂಡಿರುವ ಐಸಾಕ್, ಕೆಲವೇ ತಿಂಗಳಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದ್ದ.
ಆದರೆ ಈತನ ಹಿಂದಿನ ದಾಖಲೆಯನ್ನು ಫಿಲಿಪ್ ಆಂಗಸ್ ಎಂಬಾತ 9.52 ಸೆಂಮೀ ಅಗಲಕ್ಕೆ ಬಾಯಿ ತೆರೆದು ಮುರಿದಿದ್ದರು. ಇದೀಗ ಐಸಾಕ್ ಆ ದಾಖಲೆಯನ್ನು 10.175 ಸೆಂಮೀ ಅಗಲಕ್ಕೆ ಬಾಯಿ ತೆರೆಯುವ ಮೂಲಕ ಮುರಿದಿದ್ದಾರೆ.
https://www.facebook.com/watch/?v=165165452328681&t=1