alex Certify PF ಬಡ್ಡಿ ದರದ ಬಗ್ಗೆ ಮಹತ್ವದ ಮಾಹಿತಿ ನೀಡಿದ ಇಪಿಎಫ್ಒ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

PF ಬಡ್ಡಿ ದರದ ಬಗ್ಗೆ ಮಹತ್ವದ ಮಾಹಿತಿ ನೀಡಿದ ಇಪಿಎಫ್ಒ

ದೇಶದ 6 ಕೋಟಿ ಉದ್ಯೋಗಿಗಳಿಗೆ ಖುಷಿ ಸುದ್ದಿಯೊಂದಿದೆ. ಪಿಎಫ್ ಬಡ್ಡಿಗಾಗಿ ಕಾಯ್ತಿರುವ ನೌಕರರಿಗೆ ನೆಮ್ಮದಿ ಸುದ್ದಿಯೊಂದು ಸಿಕ್ಕಿದೆ. ಶೀಘ್ರದಲ್ಲೇ ಸಂಪೂರ್ಣ ಬಡ್ಡಿ ಮೊತ್ತವನ್ನು ಖಾತೆಗೆ ಜಮಾ ಮಾಡಲಾಗುವುದು. ಇಪಿಎಫ್ ಒನ 6 ಕೋಟಿ ಖಾತೆದಾರರು, ಪಿಎಫ್ ಬಡ್ಡಿ ಹಣವನ್ನು ಜುಲೈ ಅಂತ್ಯದ ವೇಳೆಗೆ ಖಾತೆಗೆ ವರ್ಗಾಯಿಸಬಹುದೆಂಬ ನಿರೀಕ್ಷೆಯಲ್ಲಿದ್ದರು. ಆದರೆ ಜುಲೈ 31 ರವರೆಗೆ ಇಪಿಎಫ್‌ಒ ಹಣವನ್ನು ವರ್ಗಾಯಿಸಲಿಲ್ಲ. ಈಗ ಪಿಎಫ್ ಖಾತೆದಾರರು, ಆಗಸ್ಟ್ ತಿಂಗಳಲ್ಲಿ ವರ್ಗಾಯಿಸಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಪಿಎಫ್‌ಒ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ.

ಟ್ವಿಟರ್‌ನಲ್ಲಿ ಖಾತೆದಾರರೊಬ್ಬರು ಇಪಿಎಫ್ಒ ​​ಟ್ವೀಟ್, ಟ್ಯಾಗ್ ಮಾಡಿದ್ದಾರೆ. ಇದ್ರಲ್ಲಿ ಯಾವಾಗಾ ಹಣ ವರ್ಗಾವಣೆ ಮಾಡಲಾಗುತ್ತದೆ ಎಂಬ ಪ್ರಶ್ನೆಗೆ ಇಪಿಎಫ್ಒ ಉತ್ತರ ನೀಡಿದೆ. ಯಾವಾಗ ಬಡ್ಡಿಯನ್ನು ಖಾತೆಗೆ ಜಮಾ ಮಾಡಲಾಗುತ್ತದೆಯೋ ಆಗ ಒಟ್ಟಿಗೆ ಜಮಾ ಮಾಡಲಾಗುತ್ತದೆ. ಸಂಪೂರ್ಣ ಮೊತ್ತವನ್ನು ನೀಡಲಾಗುವುದು.

ಬಡ್ಡಿಯ ಕಾರಣದಿಂದ ಯಾರಿಗೂ ತೊಂದರೆ ಆಗುವುದಿಲ್ಲ ಎಂದು ಉತ್ತರಿಸಲಾಗಿದೆ. ಆದರೆ ಬಡ್ಡಿ ಹಣವನ್ನು ಯಾವಾಗ ಪಿಎಫ್ ಖಾತೆಗೆ ವರ್ಗಾಯಿಸಲಾಗುವುದು ಎಂದು ಇಪಿಎಫ್‌ಒ ಹೇಳಿಲ್ಲ. 2020-21ರ ಆರ್ಥಿಕ ವರ್ಷಕ್ಕೆ ಸರ್ಕಾರವು ಶೇಕಡಾ 8.5 ಬಡ್ಡಿ ದರವನ್ನು ನಿಗದಿಪಡಿಸಿದೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...