alex Certify ಜನನಿಬಿಡ ರಸ್ತೆಯಲ್ಲಿ ಸ್ಕೂಟರ್ ​ಗೆ ಬೆಂಕಿ; ಸಹಾಯಕ್ಕೆ ಧಾವಿಸಿದ ಅಪರಿಚಿತರು….! ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನನಿಬಿಡ ರಸ್ತೆಯಲ್ಲಿ ಸ್ಕೂಟರ್ ​ಗೆ ಬೆಂಕಿ; ಸಹಾಯಕ್ಕೆ ಧಾವಿಸಿದ ಅಪರಿಚಿತರು….! ವಿಡಿಯೋ ವೈರಲ್

ಜನನಿಬಿಡ ರಸ್ತೆಯಲ್ಲಿ ಸ್ಕೂಟರ್​ಗೆ ಬೆಂಕಿ ಹತ್ತಿಕೊಂಡ ಸಂದರ್ಭದಲ್ಲಿ ಪ್ರತ್ಯಕ್ಷದರ್ಶಿಗಳು ತಕ್ಷಣವೇ ಸ್ಪಂದಿಸಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಅಪರಿಚಿತರೆಲ್ಲ ಒಟ್ಟಾಗಿ ಆ ಕ್ಷಣದಲ್ಲಿ ಸ್ಪಂದಿಸಿದ ರೀತಿ, ಒಗ್ಗಟ್ಟಿನ ಪ್ರದರ್ಶನ ನೆಟ್ಟಿಗರಿಗೆ ಖುಷಿತಂದಿದೆ. ಈ ವೀಡಿಯೊವು ಜನನಿಬಿಡ ರಸ್ತೆಯಲ್ಲಿ ಸ್ಕೂಟರ್​ನಲ್ಲಿ ಕುಟುಂಬ ಸಾಗುವುದನ್ನು ತೋರಿಸುತ್ತದೆ. ವಾಹನದ ಕೆಳಭಾಗದಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂಬುದು ಗೊತ್ತಾಗಿ ಅವರಿಬ್ಬರೂ ತಕ್ಷಣವೇ ಕೆಳಗಿಳಿಯುತ್ತಾರೆ ಮತ್ತು ಸುರಕ್ಷತೆ ದೃಷ್ಟಿಯಿಂದ ದೂರಕ್ಕೆ ಹೋಗುತ್ತಾರೆ. ವಾಹನಕ್ಕೆ ಅಂಟಿಕೊಂಡಿದ್ದ ಜ್ವಾಲೆಯು ಉರಿಯುತ್ತಲೇ ಇರುತ್ತದೆ.

ಈ ವೇಳೆ ಅಲ್ಲಿದ್ದ ಹಲವಾರು ಜನರು ಬೆಂಕಿಯನ್ನು ನಂದಿಸಲು ಮುಂದೆ ಬರುತ್ತಾರೆ. ಕೆಲವರು ನೀರಿನ ಬಕೆಟ್​ಗಳೊಂದಿಗೆ ಆಗಮಿಸಿದರೆ ಕೆಲವರು ನೀರಿನ ಬಾಟಲಿಗಳ ಮೂಲಕ ಜ್ವಾಲೆ ಆರಿಸಲು ಪ್ರಯತ್ನ ಪಡುತ್ತಾರೆ. ಒಟ್ಟಾರೆ ವಾಹನವನ್ನು ಉಳಿಸಲು ಹಲವಾರು ಅಪರಿಚಿತರು ಒಟ್ಟಾಗಿ ಸೇರುತ್ತಾರೆ. ಕೊನೆಯಲ್ಲಿ, ಬೆಂಕಿ ನಂದಿಸುವ ಸಾಧನದೊಂದಿಗೆ ಘಟನಾ ಸ್ಥಳಕ್ಕೆ ಧಾವಿಸಿದ ವ್ಯಕ್ತಿ ಅದರೊಂದಿಗೆ ದ್ವಿಚಕ್ರ ವಾಹನವನ್ನು ಬೆಂಕಿ ಉರಿಯದಂತೆ ನೋಡಿಕೊಳ್ಳುತ್ತಾರೆ.

ಬೆಂಕಿ ನಂದಿಸುವ ಸಾಧನದೊಂದಿಗೆ ಬಂದ ವ್ಯಕ್ತಿಯನ್ನು ನೋಡಿದಾಗ, ಅನೇಕ ಟ್ವಿಟರ್​ ಬಳಕೆದಾರರು ಆ ಕ್ಷಣಕ್ಕಾಗಿ ತನ್ನ ಇಡೀ ಜೀವನದಲ್ಲಿ ಕಾಯುತ್ತಿರುವಂತೆ ತೋರುತ್ತಿದೆ ಎಂದು ಹಾಸ್ಯ ಮಾಡಿದ್ದಾರೆ.

— Jayesh Kadia (@JayeshKadia5) October 9, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...