
ಅಪರಿಚಿತರೆಲ್ಲ ಒಟ್ಟಾಗಿ ಆ ಕ್ಷಣದಲ್ಲಿ ಸ್ಪಂದಿಸಿದ ರೀತಿ, ಒಗ್ಗಟ್ಟಿನ ಪ್ರದರ್ಶನ ನೆಟ್ಟಿಗರಿಗೆ ಖುಷಿತಂದಿದೆ. ಈ ವೀಡಿಯೊವು ಜನನಿಬಿಡ ರಸ್ತೆಯಲ್ಲಿ ಸ್ಕೂಟರ್ನಲ್ಲಿ ಕುಟುಂಬ ಸಾಗುವುದನ್ನು ತೋರಿಸುತ್ತದೆ. ವಾಹನದ ಕೆಳಭಾಗದಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂಬುದು ಗೊತ್ತಾಗಿ ಅವರಿಬ್ಬರೂ ತಕ್ಷಣವೇ ಕೆಳಗಿಳಿಯುತ್ತಾರೆ ಮತ್ತು ಸುರಕ್ಷತೆ ದೃಷ್ಟಿಯಿಂದ ದೂರಕ್ಕೆ ಹೋಗುತ್ತಾರೆ. ವಾಹನಕ್ಕೆ ಅಂಟಿಕೊಂಡಿದ್ದ ಜ್ವಾಲೆಯು ಉರಿಯುತ್ತಲೇ ಇರುತ್ತದೆ.
ಈ ವೇಳೆ ಅಲ್ಲಿದ್ದ ಹಲವಾರು ಜನರು ಬೆಂಕಿಯನ್ನು ನಂದಿಸಲು ಮುಂದೆ ಬರುತ್ತಾರೆ. ಕೆಲವರು ನೀರಿನ ಬಕೆಟ್ಗಳೊಂದಿಗೆ ಆಗಮಿಸಿದರೆ ಕೆಲವರು ನೀರಿನ ಬಾಟಲಿಗಳ ಮೂಲಕ ಜ್ವಾಲೆ ಆರಿಸಲು ಪ್ರಯತ್ನ ಪಡುತ್ತಾರೆ. ಒಟ್ಟಾರೆ ವಾಹನವನ್ನು ಉಳಿಸಲು ಹಲವಾರು ಅಪರಿಚಿತರು ಒಟ್ಟಾಗಿ ಸೇರುತ್ತಾರೆ. ಕೊನೆಯಲ್ಲಿ, ಬೆಂಕಿ ನಂದಿಸುವ ಸಾಧನದೊಂದಿಗೆ ಘಟನಾ ಸ್ಥಳಕ್ಕೆ ಧಾವಿಸಿದ ವ್ಯಕ್ತಿ ಅದರೊಂದಿಗೆ ದ್ವಿಚಕ್ರ ವಾಹನವನ್ನು ಬೆಂಕಿ ಉರಿಯದಂತೆ ನೋಡಿಕೊಳ್ಳುತ್ತಾರೆ.
ಬೆಂಕಿ ನಂದಿಸುವ ಸಾಧನದೊಂದಿಗೆ ಬಂದ ವ್ಯಕ್ತಿಯನ್ನು ನೋಡಿದಾಗ, ಅನೇಕ ಟ್ವಿಟರ್ ಬಳಕೆದಾರರು ಆ ಕ್ಷಣಕ್ಕಾಗಿ ತನ್ನ ಇಡೀ ಜೀವನದಲ್ಲಿ ಕಾಯುತ್ತಿರುವಂತೆ ತೋರುತ್ತಿದೆ ಎಂದು ಹಾಸ್ಯ ಮಾಡಿದ್ದಾರೆ.
https://twitter.com/iDivergent/status/1579760437306208257?ref_src=twsrc%5Etfw%7Ctwcamp%5Etweetembed%7Ctwterm%5E1579760437306208257%7Ctwgr%5E49703d4ee9c9a254ee51f584e7f0bed185bd8f06%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fonly-in-india-strangers-join-hands-to-help-after-scooter-catches-fire-on-busy-road-6143383.html