ಫೋಟೋ ಪಝಲ್ಗಳನ್ನು ಸಾಲ್ವ್ ಮಾಡಲು ಯತ್ನಿಸುವುದು ನಿಜಕ್ಕೂ ಮೆದುಳಿಗೆ ನೀಡುವ ಉತ್ತಮ ಕೆಲಸಗಳಲ್ಲಿ ಒಂದಾಗಿದೆ. ಇಂಥಹ ಚಾಲೆಂಜ್ಗಳು ನಿಮ್ಮ ಏಕಾಗ್ರತೆ ಹಾಗೂ ದೃಷ್ಟಿಕೋನಗಳನ್ನು ಸುಧಾರಿಸುತ್ತವೆ. ಅಲ್ಲದೇ ನಿಮ್ಮ ದೃಷ್ಟಿ ಸೂಕ್ಷ್ಮತೆಯನ್ನೂ ಇನ್ನಷ್ಟು ಹೆಚ್ಚಿಸುತ್ತವೆ. ಒತ್ತಡದಿಂದ ಬಳಲುತ್ತಿರುವವರು ಇಂತಹ ವ್ಯಾಯಾಮಗಳನ್ನು ರೂಡಿಸಿಕೊಂಡಲ್ಲಿ ಅವರ ಮೆದುಳು ನಿರಾಳತೆಯನ್ನು ಅನುಭವಿಸಲಿದೆ.
ಅಧ್ಯಯನಗಳು ಹೇಳುವ ಪ್ರಕಾರ, ಯಾರು ಪಝಲ್ಗಳನ್ನು ಬಹುಬೇಗನೇ ಸುಧಾರಿಸುತ್ತಾರೋ ಅವರು ಉತ್ತಮ ಕೌಶಲ್ಯಗಳನ್ನು ಹೊಂದಿದ ವ್ಯಕ್ತಿ ಎಂದು ಅರ್ಥವಂತೆ.
ನಿಮಗೂ ಸಹ ಕಷ್ಟದ ಸವಾಲುಗಳನ್ನು ಸಾಲ್ವ್ ಮಾಡುವುದು ಎಂದರೆ ಇಷ್ಟವೇ..? ಹಾಗಾದರೆ ಈಗ ನಿಮಗೊಂದು ಸವಾಲನ್ನು ನಾವು ನೀಡುತ್ತೇವೆ. ನಾವು ಹೇಳುವ ಸವಾಲಿನಲ್ಲಿ ನೀವು ಗೆದ್ದರೆ ನಿಮ್ಮನ್ನು ಬುದ್ಧಿವಂತರು ಎಂದು ಒಪ್ಪಿಕೊಳ್ತೇವೆ.
ಇಲ್ಲಿ ಕಾಣುವ ಶ್ವಾನಗಳ ಫೊಟೋದಲ್ಲಿ ಒಂದು ಚಿಟ್ಟೆ ಕೂಡ ಅಡಗಿ ಕುಳಿತಿದೆ. ಇದನ್ನು ಕೇವಲ ಆರು ಸೆಕೆಂಡುಗಳಲ್ಲಿ ಪತ್ತೆ ಮಾಡಲು ನಿಮಗೆ ಸಾಧ್ಯವಿದೆಯೇ..? ಕೇವಲ 1 ಪ್ರತಿಶತ ಜನರು ಮಾತ್ರ ಕೇವಲ ಆರು ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿರುವ ಚಿಟ್ಟೆಯನ್ನು ಕಂಡು ಹಿಡಿಯುವಲ್ಲಿ ಯಶಸ್ವಿಯಾಗುತ್ತಾರೆ.
ಇದು ದೃಷ್ಟಿಭ್ರಮೆಯಾಗಿದ್ದು ಇಂಥಹ ಚಿತ್ರಗಳನ್ನು ನಿಮ್ಮ ಮೆದುಳಿನ ಚುರುಕನ್ನು ಅಳೆಯುವುದಕ್ಕಾಗಿ ಬಳಕೆ ಮಾಡಲಾಗುತ್ತದೆ. ನೀವೇನಾದರೂ ಕೇವಲ ಆರು ಸೆಕೆಂಡುಗಳ ಅಂತರದಲ್ಲಿ ಈ ಫೋಟೋದಲ್ಲಿರುವ ಚಿಟ್ಟೆಯನ್ನು ಕಂಡು ಹಿಡಿದರೆ ನಿಮ್ಮ ಮೆದುಳು ಅತ್ಯಂತ ಚುರುಕಾಗಿದೆ ಎಂದು ಅರ್ಥ.
ಅಂದಹಾಗೆ ನಿಮಗೆ ಆರು ಸೆಕೆಂಡುಗಳ ಅಂತರದಲ್ಲಿ ಚಿಟ್ಟೆ ಕಂಡೀತಾ..? ಚಿಟ್ಟೆ ಕಂಡು ಹಿಡಿದಿದ್ದರೆ ನೀವು ಅತ್ಯಂತ ಚಾಣಾಕ್ಷ ಎಂದು ನಾವು ಒಪ್ಪಿಕೊಳ್ಳುತ್ತೇವೆ. ಯಾರ್ಯಾರು ಆರು ಸೆಕೆಂಡು ಕಳೆದರೂ ಇನ್ನೂ ಚಿಟ್ಟೆ ಹುಡುಕುತ್ತಾ ಇದ್ರೆ ನೀವು ಹುಡುಕ್ತಾ ಇರೋ ಚಿಟ್ಟೆ ಈ ಕೆಳಗಿನ ಫೊಟೋದಲ್ಲಿದೆ ನೋಡಿ :