alex Certify ʼಈರುಳ್ಳಿʼ ದರ ಏರಿಕೆಯಿಂದ ಕಂಗೆಟ್ಟವರಿಗೆ ಇಲ್ಲಿದೆ ಒಂದಷ್ಟು ಪರಿಹಾರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಈರುಳ್ಳಿʼ ದರ ಏರಿಕೆಯಿಂದ ಕಂಗೆಟ್ಟವರಿಗೆ ಇಲ್ಲಿದೆ ಒಂದಷ್ಟು ಪರಿಹಾರ….!

ಹಬ್ಬ ಹರಿದಿನಗಳ ಮಧ್ಯೆ ಈರುಳ್ಳಿ ಬೆಲೆ ಗಗನಕ್ಕೇರಿದ್ದು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ. ಪ್ರಸ್ತುತ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಂತಹ ಪ್ರಮುಖ ಉತ್ಪಾದಕ ರಾಜ್ಯಗಳಿಂದ ಈರುಳ್ಳಿ ದಾಸ್ತಾನು ತಡವಾಗಿ ಆಗಮಿಸಿದ ಕಾರಣ ದೆಹಲಿಯಲ್ಲಿ ಕಳೆದ 15 ದಿನದ ಹಿಂದೆ 40 ರೂ. ಇದ್ದ ಕೆಜಿ ಈರುಳ್ಳಿ ಇದೀಗ 60 ರೂ. ಮುಟ್ಟಿದೆ. ಮುಂದಿನ ದಿನಗಳಲ್ಲಿ ಕೆಜಿಗೆ 100 ರೂ. ಆಗುವ ಸಾಧ್ಯತೆಯಿದ್ದು ಹೋಟೆಲ್ ಉದ್ಯಮ ಮತ್ತು ಗೃಹಿಣಿಯರಿಗೆ ಶಾಕ್ ನೀಡಲಿದೆ.

ಹಬ್ಬ ಹರಿದಿನಗಳಲ್ಲಿ ಹೆಚ್ಚುತ್ತಿರುವ ಬೇಡಿಕೆ ಮತ್ತು ದಾಸ್ತಾನು ಕ್ಷೀಣಿಸುತ್ತಿರುವುದರಿಂದ ಈರುಳ್ಳಿ ಬೆಲೆ ಏರಿಕೆಯಾಗುತ್ತಿದೆ. ಆದರೆ ಈರುಳ್ಳಿ ಬೆಲೆ ದಿಢೀರ್‌ ಏರಿಕೆಗೆ ಪೂರೈಕೆಯಲ್ಲಿನ ಕೊರತೆಯೇ ಕಾರಣ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ.

ಒಂದು ವೇಳೆ ಮುಂದಿನ ದಿನಗಳಲ್ಲಿ ಆರುಳ್ಳಿ ಇನ್ನೂ ಹೆಚ್ಚು ಬೆಲೆ ಮುಟ್ಟಿದ್ರೆ ಅದರ ಬದಲಾಗಿ ಈರುಳ್ಳಿ ರುಚಿ, ಘಮ ನೀಡುವ ಇತರೆ ಪದಾರ್ಥಗಳ ಮೊರೆ ಹೋಗಬೇಕಾಗುತ್ತದೆ.

ಈರುಳ್ಳಿಯ ಬದಲಾಗಿ ಇರುವ ಇತರೆ ಆಯ್ಕೆಗಳೆಂದರೆ,

1. ಸಣ್ಣ ಈರುಳ್ಳಿ: ಸಣ್ಣ ಈರುಳ್ಳಿಯನ್ನ ನಾಟಿ ಈರುಳ್ಳಿ ಎಂದೂ ಕರೆಯಲಾಗುತ್ತೆ. ಮೃದುವಾದ ಮತ್ತು ಸಿಹಿಯಾದ ಈರುಳ್ಳಿ ತರಹದ ರುಚಿಯನ್ನು ಹೊಂದಿರುತ್ತವೆ, ಇದು ನಿಮಗೆ ಹೆಚ್ಚು ಸೂಕ್ಷ್ಮವಾದ ಮತ್ತು ಕಡಿಮೆ ಶಕ್ತಿಯುತವಾದ ಈರುಳ್ಳಿ ಪರಿಮಳವನ್ನು ನೀಡುತ್ತವೆ.

2. ಲೀಕ್ಸ್: ಲೀಕ್ಸ್ ಸೌಮ್ಯವಾದ ಮತ್ತು ಸ್ವಲ್ಪ ಸಿಹಿಯಾದ ಈರುಳ್ಳಿ ತರಹದ ರುಚಿಯನ್ನು ಹೊಂದಿರುತ್ತದೆ. ಇವುಗಳನ್ನು ಸೂಪ್ ಮತ್ತು ಸ್ಟ್ಯೂಗಳಿಗೆ ಬಳಸಿಕೊಳ್ಳಬಹುದು. ಈ ಭಕ್ಷ್ಯಗಳಿಗೆ ಲೀಕ್ಸ್ ಆಹ್ಲಾದಕರ ಪರಿಮಳವನ್ನು ಸೇರಿಸುತ್ತದೆ.

3. ಬೆಳ್ಳುಳ್ಳಿ: ಬೆಳ್ಳುಳ್ಳಿ ಬಲವಾದ ಮತ್ತು ವಿಶಿಷ್ಟವಾದ ಪರಿಮಳವನ್ನು ಹೊಂದಿದ್ದು ಅದು ನಿಮ್ಮ ಭಕ್ಷ್ಯಗಳಿಗೆ ಹೆಚ್ಚಿನ ರುಚಿ, ಘಮ ತರುತ್ತದೆ. ಆದಾಗ್ಯೂ ಇದನ್ನು ಮಿತವಾಗಿ ಬಳಸುವುದು ಮುಖ್ಯವಾಗಿದೆ. ಏಕೆಂದರೆ ಇದು ಈರುಳ್ಳಿಗೆ ಹೋಲಿಸಿದರೆ ಬಲವಾದ ಮತ್ತು ತೀಕ್ಷ್ಣವಾದ ರುಚಿಯನ್ನು ಹೊಂದಿರುತ್ತದೆ.

4. ಚೀವ್ಸ್ (ಈರುಳ್ಳಿ ಪೈಪ್) : ಚೀವ್ಸ್ ಸೌಮ್ಯವಾದ ಈರುಳ್ಳಿ ಪರಿಮಳವನ್ನು ನೀಡುತ್ತದೆ ಮತ್ತು ಇದನ್ನು ಸಾಮಾನ್ಯವಾಗಿ ಭಕ್ಷ್ಯಗಳಿಗೆ ಅಲಂಕರಿಸಲು ಬಳಸಲಾಗುತ್ತದೆ.

5. ಸೆಲರಿ: ಇದು ಕೊತ್ತಂಬರಿ ಸೊಪ್ಪನ್ನೇ ಹೋಲುತ್ತದೆ. ಇದರ ಕಾಂಡ ಮತ್ತು ಸೊಪ್ಪು ಈರುಳ್ಳಿ ರುಚಿ ನೀಡುವುದರಿಂದ ನಿಮ್ಮ ಪಾಕವಿಧಾನಗಳಿಗೆ ಈರುಳ್ಳಿ ಬದಲಾಗಿ ಬಳಸಬಹುದಾಗಿದೆ.

6. ಬಿಳಿ ಈರುಳ್ಳಿ (ಸ್ಕಾಲಿಯನ್ಸ್): ಇದನ್ನು ಹಸಿರು ಈರುಳ್ಳಿ, ಸ್ಕಲ್ಲಿಯನ್ಸ್ ಎಂದೂ ಕರೆಯಲಾಗುತ್ತದೆ. ಇದು ಮೃದುವಾದ ಈರುಳ್ಳಿ ರುಚಿಯನ್ನು ನೀಡುತ್ತದೆ ಮತ್ತು ಸಾಮಾನ್ಯವಾಗಿ ಭಕ್ಷ್ಯದ ಅಲಂಕಾರಕ್ಕಾಗಿ ಮತ್ತು ಪರಿಮಳವನ್ನು ಹೆಚ್ಚಿಸಲು ಬಳಸಲಾಗುತ್ತದೆ.

7. ಫೆನ್ನೆಲ್: ಇದು ಸಬಸ್ಸಿಗೆ ಸೊಪ್ಪನ್ನು ಹೋಲುತ್ತದೆ. ಫೆನ್ನೆಲ್ ಅನ್ನು ಈರುಳ್ಳಿಯ ಬದಲಾಗಿ ಕೆಲವು ಪಾಕವಿಧಾನಗಳಲ್ಲಿ ಬಳಸಬಹುದು.

8. ಈರುಳ್ಳಿ ಪುಡಿ : ಈರುಳ್ಳಿ ಪುಡಿಬಳಕೆ ಈರುಳ್ಳಿಯ ರುಚಿಯನ್ನೇ ಹೋಲುತ್ತದೆ. ಈರುಳ್ಳಿ ತುಂಡುಗಳಿಲ್ಲದೆ ನಿಮ್ಮ ಭಕ್ಷ್ಯಗಳಿಗೆ ಈರುಳ್ಳಿಯ ರುಚಿಯನ್ನು ಇದರಿಂದ ನೀಡಬಹುದು. ನಿಮ್ಮ ಆಹಾರವು ಹೆಚ್ಚು ಈರುಳ್ಳಿ ವಾಸನೆ ಬರದಂತೆ ತಡೆಯಲು ಇವುಗಳನ್ನು ಸಣ್ಣ ಪ್ರಮಾಣದಲ್ಲಿ ಬಳಸಿ.

9. ಇಂಗು: ಭಾರತೀಯ ಪಾಕಪದ್ಧತಿಯಲ್ಲಿ ಇಂಗು ಒಂದು ಮಹತ್ತರ ಸ್ಥಾನ ಪಡೆದಿದೆ. ನೀವು ಅದನ್ನು ಸಣ್ಣ ಪ್ರಮಾಣದಲ್ಲಿ ಬಳಸಿದಾಗ ನಿಮ್ಮ ಆಹಾರಕ್ಕೆ ಈರುಳ್ಳಿ ತರಹದ ಪರಿಮಳವನ್ನು ನೀಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...