ಬೆಂಗಳೂರು : ಟೊಮ್ಯಾಟೊ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಇದೀಗ ಮತ್ತೊಂದು ಶಾಕ್ ಎದುರಾಗಿದ್ದು. ಇದೀಗ ಈರುಳ್ಳಿ ಬೆಲೆಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.
ಹೌದು, ಮುಂಗಾರು ಮಳೆಯ ಅಭಾವದ ಹಿನ್ನೆಲೆಯಲ್ಲಿ . ಈಗಷ್ಟೇ ಈರುಳ್ಳಿ ಬಿತ್ತನೆ ಕಾರ್ಯನಡೆದಿದೆ. ಈರುಳ್ಳಿ ಇಳುವರಿ ಬರೋದಕ್ಕೆ ಇನ್ನು ಎರಡು ತಿಂಗಳುಬೇಕು. ಹೀಗಾಗಿ ಈರುಳ್ಳಿ ಬೆಲೆಯೂ ಶೀಘ್ರವೇ 100 ರೂ.ಗಡಿ ದಾಟುವ ಸಾಧ್ಯತೆ ಇದೆ ಎನ್ನಲಾಗಿದೆ.
ಈಗಾಗಲೇ ಈರುಳ್ಳಿ ಬೆಲೆ ಏರಿಕೆ ಆಗುತ್ತಿದ್ದು .ಕೆಜಿ ಈರುಳ್ಳಿ 15ರಿಂದ 2೦ರೂಪಾಯಿಗೆ ಸಿಗುತ್ತಿತ್ತು ಆದರೆ ಇದೀಗ ಈರುಳ್ಳಿ ಬೆಲೆ ದೀಢಿರ್ ಹೆಚ್ಚಳವಾಗಿದೆ.ಪ್ರತಿ ಕೆಜಿಗೆ ಈರಳ್ಳಿ 30ರಿಂದ 40ರೂಪಾಯಿ ತಲುಪಿದೆ. ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ 100 ರೂ.ಗಡಿ ದಾಟುವ ಸಾಧ್ಯತೆ ಇದೆ. ಈ ಮೂಲಕ ಗ್ರಾಹಕರಿಗೆ ಟೊಮ್ಯಾಟೊ ಬಳಿಕ ಈರುಳ್ಳಿ ಕಣ್ಣೀರು ತರಿಸಲಿದೆ.