ಶುಕ್ರವಾರದಿಂದ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಇಲಾಖೆ ಸಚಿವಾಲಯವು ಮರು ಬಳಕೆಯಾಗದ ಪ್ಲಾಸ್ಟಿಕ್ನ ತಯಾರಿಕೆ, ಆಮದು, ಸಂಗ್ರಹಣೆ ಹಾಗೂ ಮಾರಾಟವನ್ನು ನಿಷೇಧಿಸಿದೆ.
ರಾಷ್ಟ್ರವ್ಯಾಪಿ ಪ್ಲಾಸ್ಟಿಕ್ ನಿಷೇಧದ ಬಳಿಕ ಗುಜರಾತ್ನ ಕೆಫೆಯೊಂದು ಪ್ಲಾಸ್ಟಿಕ್ ತ್ಯಾಜ್ಯವನ್ನು ನಿರ್ವಹಿಸಲು ಹೊಸ ಮಾರ್ಗವೊಂದನ್ನು ಕಂಡು ಹಿಡಿದಿದೆ.
ಜುನಾಗಢ್ ಜಿಲ್ಲಾಡಳಿತವು ನೈಸರ್ಗಿಕ ಪ್ಲಾಸ್ಟಿಕ್ ಕೆಫೆ ಎಂಬ ಕೆಫೆಯನ್ನು ಉದ್ಘಾಟಿಸಲು ಸಜ್ಜಾಗಿದೆ. ಇಲ್ಲಿ ಗ್ರಾಹಕರು ಪ್ಲಾಸ್ಟಿಕ್ನ ಬದಲು ಪಾವತಿಯನ್ನು ಸ್ವೀಕರಿಸುತ್ತಾರೆ. ಅಂದರೆ ಕೆಫೆಯಲ್ಲಿ ಗ್ರಾಹಕರು ತಾವು ಸ್ವೀಕರಿಸುವ ಆಹಾರಗಳಿಗೆ ಬದಲಾಗಿ ಪ್ಲಾಸ್ಟಿಕ್ನ್ನು ಪಾವತಿ ಮಾಡುತ್ತಾರೆ.
ಈ ಕೆಫೆಯನ್ನು ಸರ್ವೋದರ ಸಖಿ ಮಂಡಲದ ಮಹಿಳೆಯ ಗುಂಪು ನಿರ್ವಹಿಸುತ್ತದೆ. ಕೆಫೆಯ ಅಭಿವೃದ್ಧಿಗೆ ಈ ಗುಂಪು 50 ಸಾವಿರ ರೂಪಾಯಿ ಅನುದಾನ ನೀಡಿದೆ.
ಗ್ರಾಹಕರು ತಮ್ಮ ಮನೆಯಿಂದ ಪ್ಲಾಸ್ಟಿಕ್ಗಳನ್ನು ತರಬಹುದು. ಇದರ ತೂಕದ ಆಧಾರದ ಮೇಲೆ ಜನರು ಮೆನುವಿನಲ್ಲಿರುವ ಆಹಾರವನ್ನು ಖರೀದಿ ಮಾಡಬಹುದು. ಕೆಫೆಯಿಂದ ಸಂಗ್ರಹಗೊಂಡ ತ್ಯಾಜ್ಯವನ್ನು ಜುನಾಗಢ್ ಜಿಲ್ಲಾಡಳಿತವು ಮರುಬಳಕೆ ಏಜೆನ್ಸಿಗೆ ನೀಡುತ್ತದೆ.