alex Certify ಈ ‘ಕೆಫೆ’ ಯಲ್ಲಿ ನೀವು ಪಾವತಿಸಬೇಕಿಲ್ಲ ಹಣ….! ಅದಕ್ಕಿದೆ ಪರ್ಯಾಯ ಮಾರ್ಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ‘ಕೆಫೆ’ ಯಲ್ಲಿ ನೀವು ಪಾವತಿಸಬೇಕಿಲ್ಲ ಹಣ….! ಅದಕ್ಕಿದೆ ಪರ್ಯಾಯ ಮಾರ್ಗ

ಶುಕ್ರವಾರದಿಂದ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಇಲಾಖೆ ಸಚಿವಾಲಯವು ಮರು ಬಳಕೆಯಾಗದ ಪ್ಲಾಸ್ಟಿಕ್​​ನ ತಯಾರಿಕೆ, ಆಮದು, ಸಂಗ್ರಹಣೆ ಹಾಗೂ ಮಾರಾಟವನ್ನು ನಿಷೇಧಿಸಿದೆ.

ರಾಷ್ಟ್ರವ್ಯಾಪಿ ಪ್ಲಾಸ್ಟಿಕ್​ ನಿಷೇಧದ ಬಳಿಕ ಗುಜರಾತ್​ನ ಕೆಫೆಯೊಂದು ಪ್ಲಾಸ್ಟಿಕ್​ ತ್ಯಾಜ್ಯವನ್ನು ನಿರ್ವಹಿಸಲು ಹೊಸ ಮಾರ್ಗವೊಂದನ್ನು ಕಂಡು ಹಿಡಿದಿದೆ.

ಜುನಾಗಢ್​ ಜಿಲ್ಲಾಡಳಿತವು ನೈಸರ್ಗಿಕ ಪ್ಲಾಸ್ಟಿಕ್​ ಕೆಫೆ ಎಂಬ ಕೆಫೆಯನ್ನು ಉದ್ಘಾಟಿಸಲು ಸಜ್ಜಾಗಿದೆ. ಇಲ್ಲಿ ಗ್ರಾಹಕರು ಪ್ಲಾಸ್ಟಿಕ್​​ನ ಬದಲು ಪಾವತಿಯನ್ನು ಸ್ವೀಕರಿಸುತ್ತಾರೆ. ಅಂದರೆ ಕೆಫೆಯಲ್ಲಿ ಗ್ರಾಹಕರು ತಾವು ಸ್ವೀಕರಿಸುವ ಆಹಾರಗಳಿಗೆ ಬದಲಾಗಿ ಪ್ಲಾಸ್ಟಿಕ್​​ನ್ನು ಪಾವತಿ ಮಾಡುತ್ತಾರೆ.

ಈ ಕೆಫೆಯನ್ನು ಸರ್ವೋದರ ಸಖಿ ಮಂಡಲದ ಮಹಿಳೆಯ ಗುಂಪು ನಿರ್ವಹಿಸುತ್ತದೆ. ಕೆಫೆಯ ಅಭಿವೃದ್ಧಿಗೆ ಈ ಗುಂಪು 50 ಸಾವಿರ ರೂಪಾಯಿ ಅನುದಾನ ನೀಡಿದೆ.

ಗ್ರಾಹಕರು ತಮ್ಮ ಮನೆಯಿಂದ ಪ್ಲಾಸ್ಟಿಕ್​ಗಳನ್ನು ತರಬಹುದು. ಇದರ ತೂಕದ ಆಧಾರದ ಮೇಲೆ ಜನರು ಮೆನುವಿನಲ್ಲಿರುವ ಆಹಾರವನ್ನು ಖರೀದಿ ಮಾಡಬಹುದು. ಕೆಫೆಯಿಂದ ಸಂಗ್ರಹಗೊಂಡ ತ್ಯಾಜ್ಯವನ್ನು ಜುನಾಗಢ್​​ ಜಿಲ್ಲಾಡಳಿತವು ಮರುಬಳಕೆ ಏಜೆನ್ಸಿಗೆ ನೀಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...