alex Certify ಇಂದು ಬಿಡುಗಡೆಯಾಗಲಿದೆ ಒಂದು ಸರಳ ಪ್ರೇಮ ಕಥೆ ಚಿತ್ರದ ವಿಡಿಯೋ ಹಾಡು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ಬಿಡುಗಡೆಯಾಗಲಿದೆ ಒಂದು ಸರಳ ಪ್ರೇಮ ಕಥೆ ಚಿತ್ರದ ವಿಡಿಯೋ ಹಾಡು

ondu sarala prema kathe film poster release |ವಿನಯ್ ರಾಜ್ ಕುಮಾರ್ ನಟನೆಯ 'ಒಂದು ಸರಳ ಪ್ರೇಮಕಥೆ' ಪೋಸ್ಟರ್ ರಿಲೀಸ್ Entertainment News in Kannada

ಸಿಂಪಲ್ ಸುನಿ ನಿರ್ದೇಶನದ ವಿನಯ್ ರಾಜಕುಮಾರ್ ಅಭಿನಯದ ಬಹುನಿರೀಕ್ಷಿತ ‘ಒಂದು ಸರಳ ಪ್ರೇಮ ಕಥೆ’ ಚಿತ್ರದ ವಿಡಿಯೋ ಹಾಡು ಇಂದು ಸಂಜೆ ನಾಲ್ಕು ಗಂಟೆಗೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗುತ್ತಿದ್ದು, ಗೋಲ್ಡನ್ ಸ್ಟಾರ್ ಗಣೇಶ್ ಈ ಹಾಡನ್ನು ಲಾಂಚ್ ಮಾಡಲಿದ್ದಾರೆ. ”ಗುನುಗುನುಗು” ಎಂಬ ಈ ಹಾಡಿಗೆ ಕೇಶವ್ ಆನಂದ್ ಧ್ವನಿಯಾಗಿದ್ದು, ವೀರ್ ಸಮರ್ಥ್ ಸಂಗೀತ ಸಂಯೋಜನೆ  ನೀಡಿದ್ದಾರೆ.

ರಾಮ್ ಮೂವೀಸ್ ಬ್ಯಾನರ್ ನಡಿ ಮೈಸೂರು ರಮೇಶ್ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ವಿನಯ್ ರಾಜಕುಮಾರ್ ಮಲ್ಲಿಕಾಸಿಂಗ್, ಮತ್ತು ಸ್ವಾತಿಷ್ಟ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಆದಿ ಸಂಕಲನ, ಕಾರ್ತಿಕ್ ಶರ್ಮಾ ಮತ್ತು ಸಭಾ ಕುಮಾರ್ ಛಾಯಾಗ್ರಹಣವಿದೆ. ಮುಂದಿನ ತಿಂಗಳು ಫೆಬ್ರವರಿ ಎಂಟಕ್ಕೆ ಈ ಸಿನಿಮಾ ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...