ಇಂಗ್ಲೆಂಡ್ ತಂಡಕ್ಕೆ ಇಂದು ಮರೆಯಲಾಗದ ದಿನ ಎಂದರೆ ತಪ್ಪಾಗಲಾರದು 2019 ಜುಲೈ 14ರಂದು ನಡೆದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ಮುಖಾಮುಖಿಯಾಗಿದ್ದವು ಈ ಪಂದ್ಯ ತುಂಬಾ ರೋಮಾಂಚನಕಾರಿಯಾಗಿತ್ತು ಇಂದಿಗೆ ಈ ಪಂದ್ಯ ನಡೆದು 2 ವರ್ಷಗಳಾಗಿವೆ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 241ರನ್ ಗಳ ಮೊತ್ತ ದಾಖಲಿಸಿತ್ತು ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಳ್ಳುವ ಮೂಲಕ 241ರನ್ ಗಳಿಸಿ ಪಂದ್ಯ ಟೈ ಮಾಡಿಕೊಂಡಿತು.
ಒಲಿಂಪಿಕ್ಸ್ 2020: ಇಲ್ಲಿದೆ ಭಾಗವಹಿಸಲಿರುವ ಭಾರತೀಯ ಆಟಗಾರರ ಸಂಪೂರ್ಣ ಪಟ್ಟಿ
ಈ ಪಂದ್ಯ ಡ್ರಾ ಆದ ಕಾರಣ ಸೂಪರ್ ಓವರ್ ನಡೆಸಲಾಯಿತು ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 15ರನ್ ಗಳಿಸಿತ್ತು ಇದನ್ನು ಬೆನ್ನತ್ತಿದ ನ್ಯೂಜಿಲ್ಯಾಂಡ್ ತಂಡವು 15ರನ್ ದಾಖಲಿಸಿತು, ಮತ್ತೊಮ್ಮೆ ಡ್ರಾ ಆದ ಕಾರಣ ಬೌಂಡರಿ ಆಧಾರದ ಮೇಲೆ ಇಂಗ್ಲೆಂಡ್ ತಂಡ ವಿನ್ನರ್ ಎಂದು ಘೋಷಿಸಲಾಯಿತು. ಇಂಗ್ಲೆಂಡ್ ತಂಡ ವಿಶ್ವಕಪ್ ಗೆದ್ದು ಸಂಭ್ರಮಿಸಿತು ಕ್ರಿಕೆಟ್ ಕಂಡುಹಿಡಿದ ದೇಶಕ್ಕೆ ಮೊದಲನೇ ಬಾರಿ ವಿಶ್ವಕಪ್ ದೊರೆಯಿತು ನಂತರ ಈ ಪಂದ್ಯಕ್ಕೆ ಹಲವರಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು.
https://www.instagram.com/tv/CRS01BALwfE/?utm_source=ig_web_copy_link