ರಕ್ಷಾಬಂಧನ ಹಬ್ಬವನ್ನು ಒಡಿಶಾದಲ್ಲಿ ಗಮ್ಹಾ ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಈ ದಿನ ಕೃಷ್ಣನ ಅಣ್ಣನಾದ ಬಲಭದ್ರ ಜನಿಸಿದ ದಿನ ಎನ್ನಲಾಗುತ್ತದೆ. ಈತ ರೈತರ ಆರಾಧ್ಯ ದೈವ ಕೂಡ ಹೌದು. ಇದೇ ದಿನದಂದು ಪುರಿಯ ಒಡೆಯನಾದ ಜಗನ್ನಾಥ ಸ್ವಾಮಿಗೆ ಮತ್ತು ಬಲಭದ್ರನಿಗೆ ಸುಭದ್ರಾ ದೇವಿಯು ರಾಖಿ ಕಟ್ಟುವ ಸಂಪ್ರದಾಯವನ್ನು ಸ್ಥಳೀಯ ಜನರು ಮುಂದುವರಿಸಿಕೊಂಡು ಬಂದಿದ್ದಾರೆ. ಅದರಂತೆ ಭಾನುವಾರ ಜಗನ್ನಾಥನಿಗೆ ಪ್ರಿಯವಾದ ಪಟಾ ರಾಖಿಯನ್ನು ಭಕ್ತರು ತಯಾರಿಸಿ ನೀಡಿದ್ದಾರೆ.
ಬಲಭದ್ರನಿಗೆ ನೇರಳೆ ಬಣ್ಣದ್ದು ಹಾಗೂ ಜಗನ್ನಾಥ ಅರ್ಥಾತ್ ಕೃಷ್ಣನಿಗೆ ಕೆಂಪು, ಹಳದಿ ಬಣ್ಣದ ರಾಖಿಗಳನ್ನು ಕಟ್ಟಲಾಗುತ್ತದೆ. ಪತಾರ ಸಮುದಾಯವು ದೇವರಿಗಾಗಿ ತಯಾರಿಸುವ ಈ ರಾಖಿ, ವಿಶ್ವದಲ್ಲೇ ಅತಿದೊಡ್ಡ ರಾಖಿ ಎಂಬ ಖ್ಯಾತಿ ಪಡೆದಿದೆ.
ಸಹೋದರ ಅರ್ಜುನ್ ಗೆ ರಕ್ಷಾ ಬಂಧನದ ಶುಭಾಶಯ ತಿಳಿಸಿದ ಸಾರಾ ತೆಂಡೂಲ್ಕರ್
1997ರಿಂದ ಮತ್ತೊಂದು ವಿಶಿಷ್ಟ ಕಾರ್ಯಕ್ಕೆ ಯೂತ್ ರೆಡ್ ಕ್ರಾಸ್ ಮುಂದಾಗಿದೆ. ಮರಗಳ ರಕ್ಷಣೆಯ ಸಂದೇಶ ಸಾರುವ ಸಲುವಾಗಿ, 14 ಅಡಿಗಳ ರಾಖಿಯನ್ನು ಬೌಧ್ ಜಿಲ್ಲೆಯ ಪಂಚಾಯತ್ ಕಾಲೇಜಿನ ಆವರಣದಲ್ಲಿ ಮರಕ್ಕೆ ಬಿಗಿಯಲಾಗುತ್ತಿದೆ.