alex Certify Watch Video | ವಿಮಾನದಲ್ಲಿ ಯುವತಿ ರೌಡಿಸಂ; ಹೊರಹಾಕಲು ಮತ ಚಲಾವಣೆ ಮಾಡಿದ ಪ್ರಯಾಣಿಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Video | ವಿಮಾನದಲ್ಲಿ ಯುವತಿ ರೌಡಿಸಂ; ಹೊರಹಾಕಲು ಮತ ಚಲಾವಣೆ ಮಾಡಿದ ಪ್ರಯಾಣಿಕರು

ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ವರ್ತನೆ ವಿರುದ್ಧ ರೊಚ್ಚಿಗೆದ್ದ ಸಹ ಪ್ರಯಾಣಿಕರು ಕೈ ಮೇಲೆತ್ತಿ ಮತ ಚಲಾಯಿಸುವ ಮೂಲಕ ಆಕೆಯನ್ನ ವಿಮಾನದಿಂದ ಹೊರಹಾಕಿದ್ದಾರೆ.

ನ್ಯೂಜೆರ್ಸಿಯಿಂದ ಅಟ್ಲಾಂಟಾಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ. ಇತ್ತೀಚಿಗೆ ವಿಮಾನದಲ್ಲಿದ್ದ ಮಹಿಳಾ ಪ್ರಯಾಣಿಕರೊಬ್ಬರು ಅತ್ಯಂತ ಅಶಿಸ್ತು ಮತ್ತು ಅಸಭ್ಯವಾಗಿ ವರ್ತಿಸಿದ್ದರು. ವಿಮಾನ ಟೇಕ್ ಆಫ್ ಆಗುವ ಮೊದಲು ಸುಖಾಸುಮ್ಮನೆ ಗದ್ದಲ ಮಾಡುತ್ತಿದ್ದ ಮಹಿಳಾ ಪ್ರಯಾಣಿಕರನ್ನು ವಿಮಾನದಿಂದ ಹೊರಹಾಕಲು ಪ್ರಯಾಣಿಕರ ಸಂಪೂರ್ಣ ಕ್ಯಾಬಿನ್ ಒಂದಾಗಿತ್ತು.

ಈ ವೇಳೆ ವ್ಯಕ್ತಿಯೊಬ್ಬ ಇವರನ್ನು ವಿಮಾನದಿಂದ ಹೊರಹಾಕಲು ಯಾರೆಲ್ಲಾ ಬಯಸುತ್ತೀರಿ ಕೈ ಮೇಲೆತ್ತಿ ಎಂದು ಹೇಳ್ತಿದ್ದಂತೆ, ಬಹುತೇಕ ಪ್ರಯಾಣಿಕರು ಇದಕ್ಕೆ ಸಮ್ಮತಿಸಿದರು.

ಪ್ರಯಾಣಿಕರೊಂದಿಗೆ ಜಗಳವಾಡಿದ ನಂತರ ಪ್ರಮಹಿಳೆ ಮತ್ತು ಆಕೆಯ ಸಂಗಾತಿಯನ್ನು ವಿಮಾನದಿಂದ ಹೊರಹಾಕಲಾಯಿತು. ಟಿಕ್ ಟಾಕ್ ನಲ್ಲಿ ಈ ವಿಡಿಯೋ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...