ಭೋಪಾಲ: ಮಧ್ಯಪ್ರದೇಶ ಶಾಜಾಪುರದ ಶಾಸಕ ಹುಕುಂ ಸಿಂಗ್ ಕರಾಡ ಅವರ ಪುತ್ರ ರೋಹಿತಾಪ್ ಸಿಂಗ್ ಮದ್ಯಪಾನ ಮಾಡುತ್ತ ಅಡ್ಡಾದಿಡ್ಡಿ ವಾಹನ ಚಲಾಯಿಸಿದ ವಿಡಿಯೋ ಬಹಿರಂಗವಾಗಿದೆ.
ಸೋಮವಾರ ತಡರಾತ್ರಿ ಎಸ್ಯುವಿನಲ್ಲಿ ಮದ್ಯದ ಗ್ಲಾಸ್ ಇಟ್ಟುಕೊಂಡು ವಾಹನ ಚಲಾಯಿಸುತ್ತಿದ್ದ ರೋಹಿತಾಪ್ ಉದ್ಯಮಿಯೊಬ್ಬರ ವಾಹನಕ್ಕೆ ಡಿಕ್ಕಿ ಹೊಡೆದಿದ್ದ. ಇದನ್ನು ಪ್ರಶ್ನಿಸುತ್ತ ರೋಹಿತಾಪ್ ಕಾರಿನ ಬಳಿ ಬಂದು ಮಾತನಾಡಿಸಿದ ವೇಳೆ, ಆತ ಮದ್ಯಪಾನ ಮಾಡುತ್ತಿದ್ದುದು ಖಚಿತವಾಗಿದೆ.
ಅದರ ವಿಡಿಯೋ ಚಿತ್ರೀಕರಣ ಮಾಡುತ್ತ, ಸ್ಥಳೀಯ ಪೊಲೀಸ್ ಠಾಣೆಗೆ ಬರುವಂತೆ ಅಲ್ಲಿದ್ದವರೆಲ್ಲ ಕೇಳಿದ್ದಾರೆ.
ಮುಂದಿನ ಎಸ್ಯುವಿನಲ್ಲಿ ಇದ್ದ ವ್ಯಕ್ತಿ ರೋಹಿತಾಪ್ ಬಳಿ ಬಂದು, ನನ್ನ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದಿದ್ದೀಯ ನೋಡು. ಮದ್ಯಪಾನ ಮಾಡಿಕೊಂಡು ವಾಹನ ಚಲಾಯಸುತ್ತಿದ್ದೀಯಲ್ಲ. ಸ್ಥಳೀಯ ಪೊಲೀಸ್ ಠಾಣೆಗೆ ಹೋಗೋಣ ನಡಿ ಎಂದಾಗ, ರೋಹಿತಾಪ್ ಮತ್ತೆ ಎಸ್ಯುವಿಗೆ ಗುದ್ದಿ ಅದನ್ನು ದೂಡಿಕೊಂಡೇ ವಾಹನ ಚಲಾಯಿಸಿದ ದೃಶ್ಯ ವಿಡಿಯೋದಲ್ಲಿದೆ.
ರಸ್ತೆಯುದ್ದಕ್ಕೂ SORRY……..ಕಾಲೇಜು ಗೋಡೆ ಮೇಲೂ SORRY; ಯುವಕನ ಹುಚ್ಚಾಟಕ್ಕೆ ದಂಗಾದ ಸ್ಥಳೀಯರು
ವ್ಯಾಪಾರಿ ದಿನೇಶ್ ಅಹುಜಾ (40) ಮತ್ತು ಆತನ ಸಹಚರ ಭೋಪಾಲ್ನಿಂದ ಇಂದೋರ್ಗೆ ಹೋಗುತ್ತಿದ್ದಾಗ ಶನಿವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಾಹನ ನೋಂದಣಿ ಸಂಖ್ಯೆಯ ಆಧಾರದ ಮೇಲೆ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ, ವಾಹನವನ್ನು ಜಪ್ತಿ ಮಾಡಲಾಗಿದೆ ಎಂದು ಎಂದು ಅಷ್ಟ ಪೊಲೀಸ್ ಠಾಣೆ ಪ್ರಭಾರಿ ಅನಿಲ್ ಯಾದವ್ ತಿಳಿಸಿದ್ದಾರೆ. ಆದರೆ ವಾಹನದಲ್ಲಿದ್ದದ್ದು ಶಾಸಕರ ಪುತ್ರ ಎಂಬುದನ್ನು ಅವರು ಖಚಿತಪಡಿಸಿಲ್ಲ.