
ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ಬಾಖರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 60 ವರ್ಷದ ಯಶೋಧ ಸಾಹು ಮೃತಪಟ್ಟವರಾಗಿದ್ದಾರೆ. ಇವರು ತಮ್ಮ ಸಹೋದರನ ಮೊಮ್ಮಗಳ ವಿವಾಹ ಕಾರ್ಯಕ್ರಮದ ಸಲುವಾಗಿ ಭೀಮ ಗಡ್ ಗ್ರಾಮದಿಂದ ಆಗಮಿಸಿದ್ದರು.
ಮದುವೆ ಸಂಭ್ರಮದ ವೇಳೆ ತಮ್ಮ ಇತರೆ ಮೂವರು ಸಹೋದರಿಯರ ಜೊತೆ ಯಶೋಧ ಅವರು ನೃತ್ಯ ಮಾಡುವ ವೇಳೆ ಹೃದಯಘಾತಕ್ಕೊಳಗಾಗಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸಿಯೋನಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದರು.