ಒಮಿಕ್ರಾನ್ ನ 70% ಸೋಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಂತ ಪರಿಸ್ಥಿತಿ ಇಲ್ಲ ಎಂದು ಯು.ಕೆ. ಆರೋಗ್ಯ ಭದ್ರತೆ ಸಂಸ್ಥೆ ವಿಶ್ಲೇಷಿಸಿದೆ. ಕೊರೋನಾದ ಬೇರೆ ರೂಪಾಂತರಗಳಿಗೆ ಹೋಲಿಸಿದ್ರೆ ಒಮಿಕ್ರಾನ್ ರೋಗಲಕ್ಷಣಗಳು ಸೌಮ್ಯವಾಗಿವೆ, ಹಾಗಾಗಿ ಒಮಿಕ್ರಾನ್ ಸೋಂಕಿತರು ಹೋಮ್ ಐಸೋಲೇಷನ್ನಲ್ಲಿದ್ದು ಅಥವಾ ಕ್ವಾರಂಟೈನ್ ಆಗಿ ವೈದ್ಯರ ಸಹಾಯದೊಂದಿಗೆ ಸೋಂಕಿನಿಂದ ಪಾರಾಗಬಹುದು ಎಂದು ಯು.ಕೆ ಸಂಸ್ಥೆಯ ತಜ್ಞರು ಹೇಳಿದ್ದಾರೆ.
ಗೂಗಲ್ನಲ್ಲಿ ಈ ವಿಚಾರಗಳನ್ನು ತಪ್ಪಿಯೂ ಹುಡುಕಬೇಡಿ..!
ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಜೆನ್ನಿ ಹ್ಯಾರೀಸ್ ಈ ಬಗ್ಗೆ ಮಾತಾನಾಡಿದ್ದು, ಕೊರೋನಾದ ಇತರೆ ರೂಪಾಂತರಿಗಳಷ್ಟು ಒಮಿಕ್ರಾನ್ ಪ್ರಭಾವ ಬೀರುವುದಿಲ್ಲ. ಇದರ ಗುಣಲಕ್ಷಣಗಳು ಸೌಮ್ಯವಾಗಿವೆ ಹೀಗಾಗಿ ಈ ವೇರಿಯಂಟ್ ನಿಂದ ಸೋಂಕಿತರಾದ 70% ರೋಗಿಗಳಿಗೆ ಆಸ್ಪತ್ರೆ ಕೇರ್ ನ ಅಗತ್ಯವಿಲ್ಲ. ಒಮಿಕ್ರಾನ್ ಸೋಂಕಿತರು ಮನೆಯಲ್ಲಿಯೆ ಇದ್ದು ಚಿಕಿತ್ಸೆಗೆ ಒಳಗಾಗಬಹುದು ಎಂದಿದ್ದಾರೆ.
ಇತ್ತ ಅದೇ ಯು.ಕೆ, ಮುಖ್ಯ ಆರೋಗ್ಯ ಕಾರ್ಯದರ್ಶಿ ಒಮಿಕ್ರಾನ್ ಇತ್ತೀಚೆಗೆ ಪತ್ತೆಯಾಗಿರುವ ವೇರಿಯಂಟ್. ಈ ಬಗ್ಗೆ ಈಗಲೇ ಯಾವುದೇ ನಿರ್ಧರಿತ ವಿಶ್ಲೇಷಣೆಗೆ ಬರುವುದು ಸಮಂಜಸವಲ್ಲ ಎಂದು ತಿಳಿಸಿದ್ದಾರೆ.