ರಾಜ್ಯದಲ್ಲಿ ಇಬ್ಬರಿಗೆ ಕೊರೊನಾ ಓಮಿಕ್ರಾನ್ ರೂಪಾಂತರಿ ಪತ್ತೆಯಾದ ಬೆನ್ನಲ್ಲೇ ಇದೀಗ ಗುಜರಾತ್ನಲ್ಲೂ ಒಮಿಕ್ರಾನ್ ರೂಪಾಂತರಿ ಕಾಲಿಟ್ಟಿದೆ.
ಗುಜರಾತ್ನ ಜಾಮ್ನಗರದ 50 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಪ್ರಯೋಗಾಲಯದಲ್ಲಿ ನಡೆಸಲಾದ ಪರೀಕ್ಷೆಯಲ್ಲಿ 50 ವರ್ಷದ ವ್ಯಕ್ತಿಯು ಓಮಿಕ್ರಾನ್ ರೂಪಾಂತರಿಯನ್ನು ಹೊಂದಿದ್ದಾರೆ ಎಂಬುದು ದೃಢಪಟ್ಟಿದೆ. ಈ ವ್ಯಕ್ತಿಯು ಜಿಂಬಾಬ್ವೆ ಯಿಂದ ಮರಳಿದ್ದರು ಎನ್ನಲಾಗಿದೆ. ಪ್ರಾಥಮಿಕ ಸಂಪರ್ಕಿತರನ್ನು ಆರೋಗ್ಯ ಇಲಾಖೆ ಟ್ರ್ಯಾಕ್ ಮಾಡುತ್ತಿದೆ. ಸೋಂಕಿತ ವ್ಯಕ್ತಿಯನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.