ಉಬುಂಟು ಅಧ್ಯಯನದಲ್ಲಿ, ಭಾಗವಹಿಸಿ ಸ್ಕ್ರೀನಿಂಗ್‌ಗೆ ಒಳಪಟ್ಟಿದ್ದ 230 ಜನರಲ್ಲಿ 31% ರಷ್ಟು ಜನರು ಕೋವಿಡ್ ಪಾಸಿಟಿವ್ ಆಗಿದ್ದರು. ಅದರಲ್ಲಿ 56 ಜನರಿಗೆ ಜಿನೋಮ್ ಸೀಕ್ವೆನ್ಸಿಂಗ್ ನಂತರ ಒಮಿಕ್ರಾನ್ ದೃಢಪಟ್ಟಿತ್ತು. ಅಂದರೆ ಒಮಿಕ್ರಾನ್ ಪತ್ತೆಯಾದ ಶುರುವಿನಲ್ಲಿ ಪಾಸಿಟಿವಿಟಿ ದರ ಕಡಿಮೆಯಿತ್ತು. ಅಂಕಿ ಅಂಶಗಳಲ್ಲಿ ಹೇಳುವುದಾದರೆ 1% ರಿಂದ 2.4% ಇತ್ತು. ಜೊತೆಗೆ ಗೋಚರ ಲಕ್ಷಣಗಳು ಇದ್ದವು ಎಂದು ತಜ್ಞರು ಹೇಳಿದ್ದಾರೆ.
ಎರಡನೇ ಅಧ್ಯಯನದ ಫಲಿತಾಂಶಗಳು
ಸಿಸೊಂಕೆಯ ಉಪ-ಅಧ್ಯಯನದಲ್ಲಿ, ಲಕ್ಷಣರಹಿತ ಒಮಿಕ್ರಾನ್ ಸೋಂಕಿತರ ಸಂಖ್ಯೆ ಏಕಾಏಕಿ 16% ಏರಿತು. ಲಸಿಕೆ ಹಾಕಿದವರಲ್ಲಿಯೂ ಸಹ ಹೆಚ್ಚಿನ ಲಕ್ಷಣ ರಹಿತ ವಾಹಕ ದರವನ್ನು ಗುರುತಿಸಲಾಯಿತು ಎಂದು ಅಧ್ಯಯನದ ಫಲಿತಾಂಶ ಸೂಚಿಸುತ್ತವೆ ಎಂದು ದಕ್ಷಿಣ ಆಫ್ರಿಕಾದ ವೈದ್ಯಕೀಯ ಸಂಶೋಧನಾ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.