alex Certify OMG….! ಹುಲಿ ಗುಂಪಿನ‌ ನಡುವೆ ಏಕಾಂಗಿಯಾಗಿ ಸಂಚರಿಸಿದ ಶ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OMG….! ಹುಲಿ ಗುಂಪಿನ‌ ನಡುವೆ ಏಕಾಂಗಿಯಾಗಿ ಸಂಚರಿಸಿದ ಶ್ವಾನ

ನಾಯಿಗಳ ವಿಡಿಯೋ ಇನ್ಸ್ಟಾಗ್ರಾಮ್‌ನಲ್ಲಿ ಸಾಕಷ್ಟು‌ ಜನಪ್ರಿಯ. ಇಲ್ಲೊಂದು ನಾಯಿ ಸಂಬಂಧಿ ವಿಡಿಯೋ ಅಚ್ಚರಿ ಹುಟ್ಟಿಸುವಂತಿದೆ.

ನಾಯಿಯೊಂದು ಹುಲಿಗಳ ನಡುವೆ ನಿರ್ಭೀತಿಯಿಂದ ಓಡಾಡುವ ವಿಡಿಯೋ ಕ್ಲಿಪ್‌ನಲ್ಲಿ ಕಾಣಬಹುದಾಗಿದೆ. ಹುಲಿಗಳೊಂದಿಗೆ ನಾಯಿಯ ಈ ವೈರಲ್ ವಿಡಿಯೋ ಜನರನ್ನು ಗಾಬರಿ ಬೀಳಿಸಲೂಬಹುದು‌. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡಿರಬಹುದು.

ಹುಲಿಗಳ ಗುಂಪಿನಿಂದ ಸುತ್ತುವರಿದಿದ್ದರೂ ಸಹ ಗೋಲ್ಡನ್ ರಿಟ್ರೈವರ್ ನಿರ್ಭಯವಾಗಿರುತ್ತದೆ. ತನ್ನ ಸುತ್ತಲೂ ಹುಲಿಗಳ ಉಪಸ್ಥಿತಿ ಇದ್ದರೂ ರಿಟ್ರೈವರ್‌ಗೆ ತೊಂದರೆಯಾಗುವುದಿಲ್ಲ. ಹುಲಿಗಳು ಕೂಡ ತಮ್ಮ ಮಧ್ಯದಲ್ಲಿ ನಾಯಿ ಇರುವುದನ್ನು ಲೆಕ್ಕಿಸುವುದಿಲ್ಲ ಎಂದು ತೋರುತ್ತದೆ. ನಿಸರ್ಗ ನಿಜಕ್ಕೂ ಅದ್ಭುತ ಎನ್ನುವುದಕ್ಕೆ ಈ ವಿಡಿಯೋವೇ ಸಾಕ್ಷಿ.

ಹುಲಿಗಳ ನಡುವೆ ನಿರ್ಭೀತ ನಾಯಿಯ ಈ ದೃಶ್ಯವು ಇಂಟರ್ನೆಟ್ ಬಳಕೆದಾರರನ್ನು ಮಾತ್ರ ಗೊಂದಲಕ್ಕೀಡು ಮಾಡಿದೆ. “ನಿಜವಾದ ಹುಲಿ ಇಲ್ಲಿ ಒಂದೇ” ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ಬರೆದಿದ್ದಾರೆ.

ಈ ಎರಡು ಪ್ರಾಣಿಗಳನ್ನು ಒಟ್ಟಿಗೆ ಬೆಳೆಸಿರಬೇಕು, ಇದಕ್ಕಾಗಿ ಸೌಹಾರ್ದತೆ ನೆಲೆಸಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...