ನಾವೆಲ್ಲಾ ಮಕ್ಕಳಾಗಿದ್ದ ವೇಳೆ ನಾಣ್ಯಗಳ ಸಂಗ್ರಹ ಮಾಡುವ ಕೆಲಸವನ್ನು ಕೆಲವು ದಿನಗಳ ಮಟ್ಟಿಗಾದರೂ ಮಾಡಿಯೇ ಇರುತ್ತೇವೆ. ಇದೀಗ ಆ ಹವ್ಯಾಸದಿಂದ ನಿಮಗೆ ಒಳ್ಳೆ ದುಡ್ಡು ಮಾಡುವ ಅವಕಾಶವನ್ನು ಕಾಯಿನ್‌ಬಜ಼ಾರ್ ಜಾಲತಾಣ ಕೊಡುತ್ತಿದೆ.
ಕಾಯಿನ್‌ಬಜ಼ಾರ್ ಜಾಲತಾಣಕ್ಕೆ ಭೇಟಿ ಕೊಟ್ಟು ನಿಮ್ಮದೊಂದು ಪ್ರೊಫೈಲ್ ಸೃಷ್ಟಿಸಿದರೆ ನೀವೂ ಸಹ ನಿಮ್ಮಲ್ಲಿರುವ ಅಪರೂಪದ ನಾಣ್ಯಗಳನ್ನು ಮಾರಬಹುದಾಗಿದೆ.
ವೃದ್ಧನನ್ನ ಹೆಗಲ ಮೇಲೆ ಹೊತ್ತು ಲಸಿಕಾ ಕೇಂದ್ರಕ್ಕೆ ಸಾಗಿದ ಪೊಲೀಸ್ ಸಿಬ್ಬಂದಿ..! ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ
ಸದ್ಯದ ಮಟ್ಟಿಗೆ ಒಎನ್‌ಜಿಸಿ ಸ್ಮರಣಾರ್ಥ ಬಿಡುಗಡೆ ಮಾಡಲಾದ 5 ರೂ. ಮುಖಬೆಲೆಯ ನಾಣ್ಯವೊಂದಕ್ಕೆ 200 ರೂಪಾಯಿಗಳು ಸಿಗುತ್ತಿದೆ. ಇದೇ ರೀತಿ, ಅಪರೂಪದ ಸಂಖ್ಯಾ ಸರಣಿ ಹೊಂದಿರುವ — 000 786 — ಆರ್‌ಬಿಐ ಮಾಜಿ ಗವರ್ನರ್ ಡಿ. ಸುಬ್ಬರಾವ್ ಹಸ್ತಾಕ್ಷರ ಇರುವ ನೋಟುಗಳು ಇದೇ ಜಾಲತಾಣದಲ್ಲಿ 1,999 ರೂಪಾಯಿಗೆ ಮಾರಾಟವಾಗುತ್ತಿದೆ.
1943ರಲ್ಲಿ ಭಾರತದಲ್ಲಿ ಬ್ರಿಟೀಷ್ ರಾಜ್ ಆಡಳಿತ ಇದ್ದ ವೇಳೆ ಬಿಡುಗಡೆ ಮಾಡಲಾದ 10 ರೂ. ಮುಖಬೆಲೆಯ ಹಳೆಯ ನೋಟಿದ್ದಲ್ಲಿ, ಅದರ ಮೇಲೆ ಅಶೋಕಾ ಸ್ಥಂಭ ಮತ್ತೊಂದು ಬದಿಯಲ್ಲಿ ದೋಣಿ ಇದ್ದರೆ ನಿಮಗೆ 25,000 ರೂಪಾಯಿಗಳು ಕೂತಲ್ಲಿಗೇ ಬಂದು ಸೇರುತ್ತದೆ. ಈ ನೋಟಿನ ಮೇಲೆ ಆರ್‌ಬಿಐನ ಅಂದಿನ ಗವರ್ನರ್ ಸಿ.ಡಿ. ದೇಶ್‌ಮುಖ್‌ರ ಸಹಿ ಇರಬೇಕು.