alex Certify ನಿಮ್ಮನ್ನು ಚಕಿತಗೊಳಿಸುತ್ತೆ 1985 ರ ರೆಸ್ಟೋರೆಂಟ್‌ ಬಿಲ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮನ್ನು ಚಕಿತಗೊಳಿಸುತ್ತೆ 1985 ರ ರೆಸ್ಟೋರೆಂಟ್‌ ಬಿಲ್…!

ನವದೆಹಲಿ: ಯಾವುದೇ ಸಾಮಾನ್ಯ ಹೋಟೆಲ್​ ಹೋಗಿ ಏನೇ ಒಂದು ತಿನಿಸು ಆರ್ಡರ್​ ಮಾಡಿದರೂ ಕನಿಷ್ಠ 60-70 ರೂಪಾಯಿಗಳಾಗುತ್ತವೆ. ಇನ್ನು ನಾಲ್ಕು ದುಬಾರಿಯ ತಿನಿಸು ಆರ್ಡರ್​ ಮಾಡಿದರೆ ? ಬಿಲ್​ ಸಾವಿರ ರೂಪಾಯಿ ಆಗುತ್ತದೆ. ಆದರೆ ಎಲ್ಲವೂ ಸೇರಿ ಕೇವಲ ರೂ. 26 ಎಂದರೆ ನಂಬುವಿರಾ?

ಈಗಂತೂ ಇದು ಸಾಧ್ಯವೇ ಇಲ್ಲ ಬಿಡಿ. ಇಂಥದ್ದೊಂದು ಹೋಟೆಲ್​ ಬಿಲ್​ 1985 ರದ್ದು. 37 ವರ್ಷಗಳ ಹಿಂದೆ ಉತ್ತರ ಭಾರತೀಯ ಊಟದ ಬೆಲೆ ಬರೀ ರೂ. 26. ದೆಹಲಿಯ ಲಜಪತ್​ನ ಲಾಝೀಜ್​ ರೆಸ್ಟೋರೆಂಟ್​ನಲ್ಲಿ 1985ರ ಡಿಸೆಂಬರ್​ 20ರಂದು ಹರಿಯಲಾದ ಬಿಲ್​ ಇದು. ಈ ಬಿಲ್​ ಅನ್ನು ಸ್ವತಃ ರೆಸ್ಟೋರೆಂಟ್​ ಹಂಚಿಕೊಂಡಿದೆ.

ಈ ಪೋಸ್ಟ್ ಅನ್ನು 2013ರ ಆಗಸ್ಟ್​ 12ರಂದು ಫೇಸ್​ಬುಕ್​ನಲ್ಲಿ ಹಂಚಿಕೊಳ್ಳಲಾಗಿತ್ತು. ಆದರೆ ಇದೀಗ ಮತ್ತೆ ವೈರಲ್ ಆಗಿದೆ. ಶಾಹೀ ಪನೀರ್, ದಾಲ್ ಮಖನೀ, ರಾಯ್ತಾ, ಚಪಾತಿಯನ್ನು ಯಾರೋ ಗ್ರಾಹಕರು ಅಂದು ಆರ್ಡರ್ ಮಾಡಿದ್ದರು. ನಾಲ್ಕೂ ಖಾದ್ಯಗಳ ಬೆಲೆ ಎರಡಂಕಿಯನ್ನು ದಾಟಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...