alex Certify ಈ ರಾಶಿಯವರ ʼಅದೃಷ್ಟʼ ಬದಲಿಸಲಿದೆ ಸೂರ್ಯ ಗ್ರಹಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರ ʼಅದೃಷ್ಟʼ ಬದಲಿಸಲಿದೆ ಸೂರ್ಯ ಗ್ರಹಣ

ವರ್ಷದ ಎರಡನೇ ಸೂರ್ಯ ಗ್ರಹಣ ಅಕ್ಟೋಬರ್ 25ರಂದು ಸಂಭವಿಸಲಿದೆ. ಇದು ಭಾಗಶಃ ಸೂರ್ಯಗ್ರಹಣವಾಗಿದ್ದು, ಗ್ರಹಣ ನಮ್ಮ ರಾಶಿ ಮೇಲೆ ಪ್ರಭಾವ ಬೀರುತ್ತದೆ. ಈ ಬಾರಿಯ ಸೂರ್ಯ ಗ್ರಹಣ ಕೆಲ ರಾಶಿಯವರಿಗೆ ಶುಭ ಫಲ ನೀಡಿದ್ರೆ ಮತ್ತೆ ಕೆಲ ರಾಶಿಯವರ ಮೇಲೆ ಅಶುಭ ಫಲ ನೀಡಲಿದೆ.

ಮೇಷ ರಾಶಿ : ಸೂರ್ಯಗ್ರಹಣ ಮೇಷ ರಾಶಿಯವರ ಅದೃಷ್ಟ ಬದಲಿಸಲಿದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಈ ರಾಶಿಯವರಿಗೆ ಹೂಡಿಕೆ ಮಾಡಲು ಇದು ಒಳ್ಳೆ ಸಮಯ ಎನ್ನಬಹುದು. ತಾಯಿ ಲಕ್ಷ್ಮಿ ಆಶೀರ್ವಾದ ಈ ರಾಶಿಯವರ ಮೇಲೆ ಆಗಲಿದೆ.  ವ್ಯಾಪಾರದಲ್ಲಿ ಉತ್ತಮ ಲಾಭ ಸಿಗಲಿದೆ. ಖರ್ಚು ಕಡಿಮೆಯಾಗುವ ಸಾಧ್ಯತೆಯಿದೆ.

ಸಿಂಹ ರಾಶಿ : ಅಕ್ಟೋಬರ್ 25ರಂದು ಸಂಭವಿಸುವ ಸೂರ್ಯ ಗ್ರಹಣದಿಂದ ಸಿಂಹ ರಾಶಿಗೆ ಒಳ್ಳೆಯದಾಗಲಿದೆ. ಗೃಹ ಭಾಗ್ಯ ಇವರಿಗೆ ದೊರೆಯಲಿದೆ. ಅಂದ್ರೆ ಮನೆ ಖರೀದಿಸುವ ಅವಕಾಶವಿದೆ. ದಾಂಪತ್ಯ ಜೀವನದಲ್ಲಿ ಸುಖ ಪ್ರಾಪ್ತಿಯಾಗಲಿದೆ. ಲಕ್ಷ್ಮಿ ಕೃಪೆ ಇವರ ಮೇಲೆ ಇರಲಿದೆ.

ಕನ್ಯಾ ರಾಶಿ : ಸೂರ್ಯ ಗ್ರಹಣ ಕನ್ಯಾ ರಾಶಿಯವರಿಗೂ ಮಂಗಳಕರವಾಗಿರಲಿದೆ. ಈ ರಾಶಿಯವರು ಕೈ ಹಾಕಿದ ಎಲ್ಲ ಕೆಲಸ ಯಶಸ್ವಿಯಾಗಲಿದೆ. ಮನೆ ಅಥವಾ ವಾಹನ ಖರೀದಿ ಅವಕಾಶ ಇವರಿಗೆ ಲಭಿಸಲಿದೆ. ವ್ಯಾಪಾರಕ್ಕೆ ಈ ಸಮಯ ಅನುಕೂಲಕರವಾಗಿದ್ದು, ಈ ರಾಶಿಯ ಜನರು ಹೆಚ್ಚಿನ ಲಾಭ ಪಡೆಯಲಿದ್ದಾರೆ.

ತುಲಾ ರಾಶಿ : ಸೂರ್ಯ ಗ್ರಹಣ ತುಲಾ ರಾಶಿಯವರಿಗೂ ಒಳಿತು ಮಾಡಲಿದೆ. ವಾಹನ ಖರೀದಿಗೆ ಅವಕಾಶ ಸಿಗಲಿದೆ. ಹೂಡಿಕೆಗೆ ಇದು ಉತ್ತಮ ಸಮಯ. ಲಕ್ಷ್ಮಿ ಅನುಗ್ರಹ ಈ ರಾಶಿಯವರ ಮೇಲೆ ಇರಲಿದೆ.

ವೃಶ್ಚಿಕ ರಾಶಿ : ಈ ರಾಶಿಯವರು ಖರ್ಚನ್ನು ನಿಯಂತ್ರಿಸುವುದು ಬಹಳ ಮುಖ್ಯ. ಆದ್ರೆ ವ್ಯಾಪಾರಕ್ಕೆ ಇದು ಉತ್ತಮ ಸಮಯ. ಹೊಸ ಮನೆ ಅಥವಾ ವಾಹನ ಖರೀದಿ ಮಾಡುವ ಅವಕಾಶ ನಿಮಗೆ ಸಿಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...