
ಭವೀಶ್ ಓಲಾ ಸ್ಕೂಟರ್ ಫೋಟೋವನ್ನು ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ನ ಸಂಭಾವ್ಯ ಡಿಸೈನ್ನ ಬಗ್ಗೆ ಸುಳಿವು ಸಿಗುತ್ತಿದೆ. ಬಹುಶಃ ಈ ಸ್ಕೂಟರ್ ಗುಲಾಬಿ ಬಣ್ಣದಲ್ಲಿ ಇರಬಹುದು ಎಂದು ಅಂದಾಜಿಸಲಾಗಿದೆ. ಓಲಾ ಕಂಪನಿಯು 499 ರೂಪಾಯಿಗೆ ಗ್ರಾಹಕರಿಗೆ ಬೈಕ್ ಕಾಯ್ದಿರಿಸುತ್ತಿದೆ.
ಟ್ವಿಟರ್ನಲ್ಲಿ ಅಗರ್ವಾಲ್ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಆಗಸ್ಟ್ 15ರಂದು ಲೋಕಾರ್ಪಣೆಯಾಗಲಿದೆ ಎಂದು ಹೇಳಿದ್ದಾರೆ. ಆಗಸ್ಟ್ 15ರಂದು ಓಲಾ ಎಲೆಕ್ಟ್ರಿಕ್ ಸ್ಕೂಟರ್ ಲೋಕಾರ್ಪಣೆ ಕಾರ್ಯಕ್ರಮವನ್ನು ನಡೆಸಲು ಯೋಜಿಸಿದ್ದೇವೆ. ಶೀಘ್ರದಲ್ಲೇ ಬೈಕ್ನ ಸಂಪೂರ್ಣ ಮಾಹಿತಿ ಹಾಗೂ ಉತ್ಪನ್ನದ ಲಭ್ಯತೆ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ ಎಂದು ಟ್ವೀಟಾಯಿಸಿದ್ದಾರೆ.
ಉತ್ಪನ್ನಗಳ ವಿತರಣೆ ಆರಂಭವಾಗುತ್ತಿದ್ದಂತೆಯೇ ಮುಂಗಡ ಬುಕ್ಕಿಂಗ್ ಕಾಯ್ದಿರಿಸಿದವರಿಗೆ ಮೊದಲ ಆದ್ಯತೆ ನೀಡುತ್ತದೆ. ಈ ಮಧ್ಯದಲ್ಲಿ ಬಳಕೆದಾರರು ಮರುಪಾವತಿ ಬಯಸಿದಲ್ಲಿ ಯಾವುದೇ ಸಮಯದಲ್ಲಿ ಹಣವನ್ನು ವಾಪಸ್ ಪಡೆಯಬಹುದು ಎಂದು ಕಂಪನಿ ಹೇಳಿದೆ.