ಓಲಾ ಎಲೆಕ್ಟ್ರಿಕ್ ತನ್ನ ಇವಿ ಸ್ಕೂಟರ್‌ಗಳಾದ ಓಲಾ ಎಸ್1 ಮತ್ತು ಓಲಾ ಎಸ್1 ಪ್ರೋಗಳನ್ನು ಡೆಲಿವರಿ ನೀಡಲು ಆರಂಭಿಸಿದ್ದು, ಬೆಂಗಳೂರು ಮತ್ತು ಚೆನ್ನೈನ ಗ್ರಾಹಕರಿಗೆ ಮೊದಲ ಡೆಲಿವರಿಗಳನ್ನು ಮಾಡಿದೆ. ಡಿಸೆಂಬರ್ 15ರಿಂದ ಸ್ಕೂಟರ್‌ಗಳ ಡೆಲಿವರಿ ಆರಂಭಿಸುವುದಾಗಿ ಈ ತಿಂಗಳ ಆರಂಭದಲ್ಲಿ ಓಲಾ ಸಿಇಓ ಭವಿಶ್ ಅಗರ್ವಾಲ್ ತಿಳಿಸಿದ್ದರು.
“ಮೊದಲ 100 ಗ್ರಾಹಕರಿಗೆ ಬೆಂಗಳೂರು ಹಾಗೂ ಚೆನ್ನೈನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಖರೀದಿ ದಿನಾಂಕವನ್ನು ಆಧರಿಸಿ, ವೈಜ್ಞಾನಿಕ ವಿಧಾನವೊಂದರ ಮೂಲಕ ಅವತರಣಿಕೆ, ಸ್ಥಳ, ಬಣ್ಣ ಹಾಗೂ ಇತರೆ ಲಕ್ಷಣಗಳ ಮೇಲೆ ಆದ್ಯತೆಯ ಡೆಲಿವರಿಗಳನ್ನು ಮಾಡಲಾಗುವುದು,” ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಚಿಪ್‌ಗಳ ಕೊರತೆಯಿಂದಾಗಿ ತನ್ನ ಇವಿ ಸ್ಕೂಟರ್‌ಗಳ ಉತ್ಪಾದನೆ ತಡವಾದ ಕಾರಣ ಡೆಲಿವರಿಗಳು ಸ್ವಲ್ಪ ತಡವಾಗುವುದಾಗಿ ಓಲಾ ವಿಷಾದ ವ್ಯಕ್ತಪಡಿಸಿತ್ತು.
ಸರಳ ವಿನ್ಯಾಸದ ಈ ಸ್ಕೂಟರ್‌ಗಳಿಗೆ ಎರಡೂ ಬದಿಯಲ್ಲಿ ಎಲ್‌ಇಡಿ ದೀಪಗಳಿದ್ದು, 12-ಇಂಚಿನ ಬಹುಲೋಹದ ಚಕ್ರಗಳು ಮತ್ತು ಮೋನೋಶಾಕ್‌ಗಳನ್ನು ನೀಡಲಾಗಿದೆ.
BREAKING: ನೇಣು ಬಿಗಿದ ಸ್ಥಿತಿಯಲ್ಲಿ ಸ್ವಾಮೀಜಿ ಮೃತದೇಹ ಪತ್ತೆ
ಡಚ್ ಕಂಪನಿಯಾದ ಎಟೆರ‍್ರಾ ಆಪ್ ಸ್ಕೂಟರ್ ಅನ್ನು ಓಲಾ ಕೆಲ ದಿನಗಳ ಹಿಂದೆ ಖರೀದಿಸಿದ್ದು, ತನ್ನ ಇವಿ ಸ್ಕೂಟರ್‌ಗಳಿಗೆ ಅದೇ ಲುಕ್ ಕೊಟ್ಟಿದೆ.
ಈ ಸ್ಕೂಟರ್‌ಗಳು ಕೀ ಇಲ್ಲದೇ ಕಾರ್ಯಾಚರಿಸಬಲ್ಲವಾಗಿವೆ. ನಿಮ್ಮ ಫೋನ್‌ನಲ್ಲಿ ಡೌನ್ಲೋಡ್ ಮಾಡಬಲ್ಲ ಅಪ್ಲಿಕೇಶನ್ ಒಂದರ ಮೂಲಕ ಸ್ಕೂಟರ್ ಚಾಲೂ ಮಾಡಬಹುದಾಗಿದೆ. ನೀವು ಸ್ಕೂಟರ್ ಬಳಿ ಹೋಗುತ್ತಲೇ ನಿಮ್ಮನ್ನು ಸೆನ್ಸ್ ಮಾಡುವ ಸ್ಕೂಟರ್ ತನ್ನಿಂತಾನೇ ಅನ್ಲಾಕ್ ಆಗಲಿದೆ.
ಭಾರತದ ಸ್ವಾತಂತ್ರ‍್ಯೋತ್ಸವದ 75ನೇ ವರ್ಷಾಚರಣೆಯ ದಿನದಂದು ತನ್ನ ಸ್ಕೂಟರ್‌ಗಳನ್ನು ಓಲಾ ಬಿಡುಗಡೆ ಮಾಡಿತ್ತು. ಓಲಾ ಎಸ್1ನ ಬೆಲೆ ಒಂದು ಲಕ್ಷ ರೂಪಾಯಿಗೆ ಒಂದು ರೂಪಾಯಿ ಕಮ್ಮಿ ಇದ್ದರೆ, ಓಲಾ ಎಸ್1 ಪ್ರೋ ಬೆಲೆಯು 1,30,000 ರೂ.ಗೆ ಒಂದು ರೂಪಾಯಿ ಕಡಿಮೆ ಇದೆ.
ಬೇರೆ ಬೇರೆ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳಿಗೆ ಕೊಡುವ ಸಬ್ಸಿಡಿ ಆಧರಿಸಿ ಸ್ಕೂಟರ್‌ಗಳ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ.