ಆಗಸ್ಟ್ 15ರಂದು ಓಲಾ ಕಂಪನಿಯು ತನ್ನ ಮೊದಲ ಸರಣಿಯ ಎಲೆಕ್ಟ್ರಿಕ್ ಬೈಕ್ ಗಳನ್ನು ಮಾರುಕಟ್ಟೆಗೆ ಅನಾವರಣಗೊಳಿಸಿತ್ತು. ಓಲಾ ಎಸ್1 ಎಲೆಕ್ಟ್ರಿಕ್ ಸ್ಕೂಟರ್ ಎರಡು ಟ್ರಿಮ್ಸ್ಗಳಲ್ಲಿ ಅಂದರೆ ಎಸ್ 1 ಹಾಗೂ ಎಸ್ 1 ಪ್ರೋ ಗಳಲ್ಲಿ ಲಭ್ಯವಿದೆ. ಇವುಗಳ ಬೆಲೆ ಕ್ರಮವಾಗಿ 99,999 ರೂ. ಹಾಗೂ 1,29,999 ರೂಪಾಯಿ ಆಗಿದೆ.
ಓಲಾ ಕಂಪನಿಯು ಸೆಪ್ಟೆಂಬರ್ 8ರಿಂದ ಓಲಾ ಎಸ್1 ಖರೀದಿಗೆ ಅಧಿಕೃತವಾಗಿ ತೆರವುಗೊಳ್ಳಲಿದೆ. ಹಾಗೂ 1000ಕ್ಕೂ ಅಧಿಕ ನಗರ ಹಾಗೂ ಗ್ರಾಮಗಳಲ್ಲಿ ಅಕ್ಟೋಬರ್ನಲ್ಲಿ ಸ್ಕೂಟರ್ ಡೆಲಿವರಿ ಮಾಡಲಿದೆ.
ಸೆಪ್ಟೆಂಬರ್ 8ರಿಂದ ಕಂಪನಿಯು 499 ರೂಪಾಯಿ ಮುಂಗಡ ಹಣಕ್ಕೆ ಬುಕ್ಕಿಂಗ್ ಆರಂಭಿಸಲಿದೆ. ಓಲಾ ಎಲೆಕ್ಟ್ರಿಕ್ ಬೈಕ್ಗಳಿಗೆ 2999 ರೂಪಾಯಿಗಳಿಂದ ಇಎಂಐ ಆರಂಭಿಸಲು ಇಎಂಐ ಕಂಪನಿ ಜೊತೆ ಒಪ್ಪಂದವನ್ನು ಮಾಡಿಕೊಂಡಿದೆ. ಹಾಗಾದರೆ ಯಾವ್ಯಾವ ಬ್ಯಾಂಕ್ಗಳ ಜೊತೆ ಓಲಾ ಒಪ್ಪಂದ ಮಾಡಿಕೊಂಡಿದೆ ಅನ್ನೋದಕ್ಕೆ ಇಲ್ಲಿದೆ ಮಾಹಿತಿ.
ಹೆಚ್ಡಿಎಫ್ಸಿ
ಐಸಿಐಸಿಐ
ಐಡಿಎಫ್ಸಿ ಫಸ್ಟ್ ಬ್ಯಾಂಕ್
ಬ್ಯಾಂಕ್ ಆಫ್ ಬರೋಡಾ
ಕೋಟಕ್ ಮಹೀಂದ್ರಾ
ಆ್ಯಕ್ಸಿಕ್ ಬ್ಯಾಂಕ್
ಟಾಟಾ ಕ್ಯಾಪಿಟಲ್
ಯೆಸ್ ಬ್ಯಾಂಕ್
ಎಯು ಸ್ಮಾಲ್ ಫೈನಾನ್ಶಿಯಲ್ ಬ್ಯಾಂಕ್
ಜನ ಸ್ಮಾಲ್ ಫೈನಾನ್ಸ್
ಓಲಾ ಎಸ್1 ಸ್ಕೂಟರ್ 181 ಕಿಮೀ ಶ್ರೇಣಿಯೊಂದಿಗೆ ಬರಲಿದೆ. ಇದು ಗಂಟೆಗೆ 115 ಕಿಮೀ ಗರಿಷ್ಟ ವೇಗ ಹೊಂದಿದೆ ಹಾಗೂ 40 ನಿಮಿಷಗಳಲ್ಲಿ ಬ್ಯಾಟರಿ ಚಾರ್ಜ್ ಆಗಲಿದೆ. ಈ ಸ್ಕೂಟರ್ ರಿವರ್ಸ್ ಮೋಡ್, ಹಿಲ್ ಹೋಲ್ಡ್ ಫಂಕ್ಷನ್, ಡ್ರೈವಿಂಗ್ ಮೋಡ್ಸ್ ಹಾಗೂ ಕ್ರ್ಯೂಸ್ ಕಂಟ್ರೋಲ್ನಂತಹ ವೈಶಿಷ್ಠ್ಯ ಹೊಂದಿದೆ.