ಓಲಾ ಎಲೆಕ್ಟ್ರಿಕ್ ಸ್ಕೂಟರ್ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್: ಡಿಸೆಂಬರ್ 15 ರಿಂದ ಡೆಲಿವರಿ ಶುರು 05-12-2021 1:33PM IST / No Comments / Posted In: Automobile News, Bike News, Karnataka, Latest News, Live News ತನ್ನ ಬ್ರಾಂಡ್‌ನ ಓಲಾ ಎಸ್1 ಮತ್ತು ಓಲಾ ಎಸ್1 ಪ್ರೋ ಇ-ಸ್ಕೂಟರ್‌ಗಳ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿರುವ ಓಲಾ, ಡಿಸೆಂಬರ್ 15ರಿಂದ ಡೆಲಿವರಿಗಳನ್ನು ಆರಂಭಿಸುವುದಾಗಿ ಕಂಪನಿಯ ಸಿಇಓ ಭವಿಶ್ ಅಗರ್ವಾಲ್ ತಿಳಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಸೆಮಿಕಂಡಕ್ಟರ್‌ಗಳು ಹಾಗೂ ಚಿಪ್‌ಗಳ ತೀವ್ರ ಕೊರತೆಯ ಕಾರಣದಿಂದಾಗಿ ಸ್ಕೂಟರ್‌ಗಳನ್ನು ಗ್ರಾಹಕರಿಗೆ ಡಿಲಿವರಿ ಮಾಡುವುದು ಕೊಂಚ ತಡವಾಗಬಹುದು ಎಂದು ಕಳೆದ ತಿಂಗಳು ಓಲಾ ತಿಳಿಸಿತ್ತು. ಓಲಾದ ಇ-ಸ್ಕೂಟರ್‌ಗಳ ಚಿತ್ರಗಳನ್ನು ಪೋಸ್ಟ್ ಮಾಡಿರುವ ಅಗರ್ವಾಲ್, “ಸ್ಕೂಟರ್‌ಗಳು ಸಜ್ಜಾಗುತ್ತಿವೆ. ಉತ್ಪಾದನೆಯನ್ನು ವರ್ಧಿಸಲಾಗಿದ್ದು, 15 ಡಿಸೆಂಬರ್‌ನಿಂದ ಡೆಲಿವರಿ ಮಾಡಲು ಸಜ್ಜಾಗಿದ್ದೇವೆ. ನಿಮ್ಮ ತಾಳ್ಮೆಗೆ ಧನ್ಯವಾದಗಳು,” ಎಂದು ಟ್ವೀಟ್ ಮಾಡಿದ್ದಾರೆ. ಸ್ವಾತಂತ್ರ‍್ಯೋತ್ಸವದ 75ನೇ ವರ್ಷಾಚರಣೆಯ ವೇಳೆ ತನ್ನ ಇ-ಸ್ಕೂಟರ್‌ಗಳನ್ನು ಲಾಂಚ್ ಮಾಡಿದ್ದ ಓಲಾ, ತನ್ನ ಎಸ್1 ಮಾಡೆಲ್‌ಗೆ ಒಂದು ಲಕ್ಷ ರೂ.ಗಳಿಗೆ ಒಂದು ರೂಪಾಯಿ ಕಮ್ಮಿಯಂತೆ ಬೆಲೆ ಫಿಕ್ಸ್ ಮಾಡಿದ್ದು, ಓಲಾ ಎಸ್1 ಪ್ರೋಗೆ 1,30,000 ರೂಪಾಯಿಗೆ ಒಂದು ರೂಪಾಯಿ ಕಮ್ಮಿಯಂತೆ ರೇಟ್ ತೋರಿಸಿದೆ. ಎಲೆಕ್ಟ್ರಿಕ್ ಸ್ಕೂಟರ್‌ಗಳ ಖರೀದಿಗೆ ನೀಡುವ ಸಬ್ಸಿಡಿ ಆಧರಿಸಿ ಈ ಸ್ಕೂಟರ್‌ಗಳ ಬೆಲೆಗಳು ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಇರಲಿವೆ. Scooters are getting ready 🙂 Production ramped up and all geared to begin deliveries from 15th Dec. Thank you for your patience! pic.twitter.com/d2ydB3TXTm — Bhavish Aggarwal (@bhash) December 4, 2021