![](https://kannadadunia.com/wp-content/uploads/2021/07/b7dae519-48d5-4891-b36d-b8d23f859bb0-1.jpg)
ವಿದ್ಯುತ್ ಚಾಲಿತ ವಾಹನಗಳ ಬೇಡಿಕೆಯನ್ನು ತಣಿಸಲು ಮುಂದಾಗಿರುವ ಓಲಾ ತನ್ನ ಹೊಸ ಇವಿ ವಾಹನಗಳ ಬಗ್ಗೆ ಜನರಲ್ಲಿ ಸಾಕಷ್ಟು ಕ್ರೇಜ಼್ ಸೃಷ್ಟಿಸಿದೆ.
ತಾನು ಉತ್ಪಾದಿಸಲಿರುವ ಇವಿ ವಾಹನಗಳಿಗೆ ಅದಾಗಲೇ ಬುಕಿಂಗ್ ವ್ಯವಸ್ಥೆ ಕಲ್ಪಿಸಿರುವ ಬೆಂಗಳೂರು ಮೂಲದ ಕಂಪನಿ ಈ ಬಗ್ಗೆ ಇನ್ನೂ ಮಹತ್ವದ ಮಾಹಿತಿಗಳನ್ನು ಬಿಟ್ಟುಕೊಟ್ಟಿಲ್ಲ.
ಆದರೂ ಸಹ ಬುಕಿಂಗ್ ಸ್ಲಾಟ್‌ಗಳು ಮುಕ್ತವಾದ 24 ಗಂಟೆಗಳಲ್ಲೇ ಲಕ್ಷಕ್ಕೂ ಹೆಚ್ಚಿನ ಬುಕಿಂಗ್‌ಗಳು ಓಲಾ ಇವಿ ವಾಹನಗಳಿಗೆ ಆಗಿಬಿಟ್ಟಿವೆ.
ಈ ಕ್ರೇಜ಼್ ಅನ್ನೇ ಬಳಸಿಕೊಂಡು ಮಾರ್ಕೆಟಿಂಗ್ ತಂತ್ರಗಳನ್ನು ಹೆಣೆಯುತ್ತಿರುವ ಓಲಾದ ಸಿಇಓ ಭವಿಶ್ ಅಗರ್ವಾಲ್ ಟ್ವಿಟರ್‌ನಲ್ಲಿ ಪೋಲಿಂಗ್ ಅಭಿಯಾನ ಆರಂಭಿಸಿದ್ದು, ಓಲಾ ಇವಿ ಸ್ಕೂಟರ್‌ನ ಗರಿಷ್ಠ ವೇಗ ಎಷ್ಟಿರಬೇಕೆಂದು ಪ್ರಶ್ನೆ ಕೇಳಿದ್ದಾರೆ.
ರಾಜ್ ಕುಂದ್ರಾ ಪೋನೋಗ್ರಫಿ ಪ್ರಕರಣ; ಹೇಳಿಕೆ ನೀಡುವಾಗ ಕುಸಿದು ಬಿದ್ದ ಶಿಲ್ಪಾ ಶೆಟ್ಟಿ
ಟ್ವಿಟ್ಟಿಗರಿಗೆ ಈ ಪ್ರಶ್ನೆಗೆ ಉತ್ತರಿಸಲು ಬಹು ಆಯ್ಕೆಗಳನ್ನು ಕೊಟ್ಟಿರುವ ಅಗರ್ವಾಲ್, ಪ್ರತಿ ಗಂಟೆಗೆ 80-100 ಕಿಮೀವರೆಗೂ ಆಯ್ಕೆಗಳನ್ನು ಕೊಟ್ಟಿದ್ದಾರೆ.
ಈ ಇವಿ ಸ್ಕೂಟರ್ ಬೆಲೆ ಎಷ್ಟಿರಬಹುದೆಂದು ಸಹ ಅನೇಕ ಊಹೆಗಳು ಹರಿದಾಡುತ್ತಿದ್ದು, 80,000 ರೂಪಾಯಿಯಿಂದ ಒಂದು ಲಕ್ಷ ರೂಪಾಯಿಗಳವರೆಗೂ ಇರುವ ಅಂದಾಜಿನ ಚರ್ಚೆನಡೆದಿದೆ.
ಒಮ್ಮೆ ಚಾರ್ಜ್ ಮಾಡಿದರೆ 75 ಕಿಮೀವರೆಗೂ ಹೋಗಬಲ್ಲ ಸಾಮರ್ಥ್ಯವಿರಲಿರುವ ಓಲಾ ಇವಿ ಸ್ಕೂಟರ್‌ಗಳು ಪೂರ್ಣ ಚಾರ್ಜ್ ಮೇಲೆ 150 ಕಿಮೀವರೆಗೂ ಕ್ರಮಿಸಬಲ್ಲವು ಎಂದು ವರದಿಗಳಾಗಿವೆ.