75ನೇ ಸ್ವಾತಂತ್ರ್ಯೋತ್ಸವ ದಿನ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಬಿಡುಗಡೆ ಮಾಡಲು ಸನ್ನದ್ಧವಾಗಿರುವ ಓಲಾ ಎಲೆಕ್ಟ್ರಿಕ್, ಆಗಸ್ಟ್ 15, 2021ರಂದು ಬಿಡುಗಡೆಯಾಗಲಿರುವ ಎಲ್ಲಾ ಬಣ್ಣದ ಒಂದೊಂದು ಸ್ಕೂಟರ್ನ ಚಿತ್ರವೊಂದನ್ನು ಬಿಡುಗಡೆ ಮಾಡಿದೆ.
ಓಲಾ ಸಿಇಓ ಭವೀಶ್ ಅಗರ್ವಾಲ್ ಈ ಚಿತ್ರವನ್ನು ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.
ಒಂಬತ್ತು ವಿವಿಧ ಬಣ್ಣಗಳ ಓಲಾ ಎಲೆಕ್ಟ್ರಿಕ್ ಸ್ಕೂಟರ್ಗಳು ವಿವಿಧ ಹಂತಗಳಲ್ಲಿ ಪಾರ್ಕ್ ಮಾಡಿರುವುದನ್ನು ಚಿತ್ರದಲ್ಲಿ ಕಾಣಬಹುದಾಗಿದೆ.
ಪೂರಿ-ಇಡ್ಲಿ ಜೊತೆ ಸಕತ್ ಟೇಸ್ಟಿ ಈ ಸಾಂಬಾರು
ಸದ್ಯದ ಮಟ್ಟಿಗೆ ಸ್ಕೂಟರ್ನ ಬೆಲೆಯನ್ನು ಓಲಾ ಬಹಿರಂಗ ಮಾಡದೇ ಇದ್ದರೂ ಸಹ 80,000 ರೂಪಾಯಿಯಿಂದ 1,10,000 ರೂ.ಗಳವರೆಗೆ ಬೆಲೆ ಇರಬಹುದು ಎಂಬ ನಿರೀಕ್ಷೆ ಬಲವಾಗಿದೆ.
ಒಮ್ಮೆ ಚಾರ್ಜ್ ಮಾಡಿದರೆ 150 ಕಿಮೀ ಚಲಿಸಬಲ್ಲ ಈ ಸ್ಕೂಟರ್ಗಳು, 18 ನಿಮಿಷಗಳ ಚಾರ್ಜ್ನಿಂದ 75 ಕಿಮೀ ಕ್ರಮಿಸಲಿವೆ ಎಂದು ಕಂಪನಿ ಈ ಹಿಂದೆ ತಿಳಿಸಿತ್ತು.