ಇತ್ತೀಚೆಗೆ ದೇಶಾದ್ಯಂತ ಕೆಲವೆಡೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಗಳಲ್ಲಿ ಬೆಂಕಿ ಕಾಣಿಸಿಕೊಂಡು ಉರಿದ ಪ್ರಕರಣಗಳು ದಾಖಲಾಗಿದ್ದರಿಂದ ಕಂಪನಿಯು ಸ್ಕೂಟರ್ ಗಳನ್ನು ಹಿಂಪಡೆದಿತ್ತು.
ಇದರ ಬೆನ್ನಲ್ಲೇ ಇದೀಗ ಕಂಪನಿಯ ಸಹ-ಸಂಸ್ಥಾಪಕ ಭವೀಶ್ ಅಗರ್ವಾಲ್ ಹಿಮಚ್ಛಾದಿತ ಪ್ರದೇಶದಲ್ಲಿ ಐದು ಓಲಾ ಸ್ಕೂಟರ್ ಗಳನ್ನು ನಿಲ್ಲಿಸಿ ಫೋಟೋ ತೆಗೆದು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಅವರು `Incredible India!’ ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ.
ಆದರೆ, ಅವರ ಈ ಟ್ವಿಟ್ಟರ್ ಗೆ ಸಾಕಷ್ಟು ಜನ ನೆಟ್ಟಿಗರು ಟೀಕಾಪ್ರಹಾರವನ್ನೇ ಮಾಡಿದ್ದಾರೆ. “ಹಿಮವಿರುವ ಜಾಗದಲ್ಲಿ ನಿಲ್ಲಿಸಿರುವ ಸ್ಕೂಟರ್ ಗಳಿಗೆ ಬೆಂಕಿ ಹತ್ತಿಕೊಂಡಾಗ ಅಲ್ಲಿನ ವಾತಾವರಣ ನಿಮ್ಮನ್ನು ಬಿಸಿ ಮಾಡುತ್ತದೆ’’ ಎಂದು ನೆಟ್ಟಿಗರೊಬ್ಬರು ಕಾಲೆಳೆದಿದ್ದಾರೆ.
ಹೋಟೆಲ್ ಬಾಲ್ಕನಿಯಿಂದ ಜಿರಾಫೆಗೆ ಆಹಾರವುಣಿಸಿದ ಮಹಿಳೆ: ವಿಡಿಯೋ ವೈರಲ್
ಹೀಗೆಯೇ ಟೀಕಾಪ್ರಹಾರಗಳು ಮುಂದುವರಿದಿದ್ದು, “ಹಿಮಾಲಯದಲ್ಲಿ ಬಿಸಿ ಗಾಳಿ”, “ಅಗ್ನಿ & ಮಂಜು ಹಾಡು’’ ಎಂದೆಲ್ಲಾ ಓಲಾ ಕಂಪನಿಯ ಸಿಇಒ ರನ್ನು ಲೇವಡಿ ಮಾಡಿದ್ದಾರೆ.
ಈ ರೀತಿಯಾದ ಟೀಕೆಗಳು ನಡೆಯುತ್ತಿದ್ದು, ಭವೀಶ್ ಅವರ ಫೋಟೋ ಸಾಕಷ್ಟು ಟ್ರೆಂಡ್ ಆಗುತ್ತಿದೆ. ಕೆಲವು ಸ್ಕೂಟರ್ ಗಳಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಓಲಾ ಕಂಪನಿ ತನ್ನ 1441 ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ವಾಪಸ್ ತೆಗೆದುಕೊಂಡಿತ್ತು. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿಕೆ ನೀಡಿತ್ತು.
https://twitter.com/The_Sleigher/status/1521082439078072322?ref_src=twsrc%5Etfw%7Ctwcamp%5Etweetembed%7Ctwterm%5E1521082439078072322%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fola-ceo-shares-photo-of-electric-scooters-in-snowy-spot-sets-comments-section-on-fire-5097697.html