alex Certify ಸಲ್ಮಾನ್ ಫ್ಯಾನ್ಸ್ ಗಳಿಗಾಗಿ ಪ್ಲೇ ಸ್ಟೋರ್‌ ನಲ್ಲಿ ‘ಸೆಲ್ಮೊನ್ ಭಾಯಿ’ ಗೇಮ್ ಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಲ್ಮಾನ್ ಫ್ಯಾನ್ಸ್ ಗಳಿಗಾಗಿ ಪ್ಲೇ ಸ್ಟೋರ್‌ ನಲ್ಲಿ ‘ಸೆಲ್ಮೊನ್ ಭಾಯಿ’ ಗೇಮ್ ಲಭ್ಯ

ಏಲಿಯನ್ಸ್ ಗಳ ವಿರುದ್ಧ ಸೂಪರ್ ಹೀರೊಗಳು ಹೋರಾಡುವುದನ್ನು ನೋಡಿರುತ್ತೀರಿ. ಅದೇ ರೀತಿ ಬಾಲಿವುಡ್‍ನ ಸೂಪರ್‌ ಸ್ಟಾರ್ ಸಲ್ಮಾನ್ ಖಾನ್ ಅವರು ಕೂಡ ಹೋರಾಟ ನಡೆಸಿದ್ದಾರೆ‌ !

ಹೌದು, ಆದರೆ ನೀವಂದುಕೊಂಡಂತೆ ಅವರ ಮುಂದಿನ ಸಿನಿಮಾದಲ್ಲಿ ಅಲ್ಲ. ಬದಲಿಗೆ ಸಲ್ಮಾನ್ ಭಾಯಿ ಅವರ ಫ್ಯಾನ್ಸ್ ಗಾಗಿ ಗೂಗಲ್ ಪ್ಲೇ ಸ್ಟೋರ್‍ನಲ್ಲಿ ಅಭಿವೃದ್ಧಿಪಡಿಸಲಾಗಿರುವ ವಿಶೇಷ ಗೇಮ್ ‘ಸೆಲ್ಮೊನ್ ಭಾಯಿ’ ಯಲ್ಲಿ.

ಸಲ್ಮಾನ್‌ ಹೆಸರಿನ ಮೂರು ಖ್ಯಾತನಾಮರ ಹೆಸರುಗಳು ಒಂದೇ ಟ್ವೀಟ್‌ ಸರಣಿಯಲ್ಲಿ ಬಂದಾಗ….!

ಪುಣೆ ಮೂಲದ ಪರೊಡಿ ಸ್ಟುಡಿಯೋಸ್ ಈ ಗೇಮ್ ಸಿದ್ಧಪಡಿಸಿದ್ದು, ಫ್ಯಾನ್ಸ್ ಗಳ ಮನಗೆದ್ದಿದೆ.

ಪ್ಲೇಸ್ಟೋರ್‍ನಲ್ಲಿ 4.7 ರೇಟಿಂಗ್ ಇದೆ. ಐಷ್ ಹೆಸರಿನ ಮದ್ಯಪಾನ ಕೂಡ ಸೆಲ್ಮೊನ್ ಈ ಗೇಮ್‍ನಲ್ಲಿ ಮಾಡುತ್ತಾರೆ. ಇದು ಮೂರು ಹಂತಗಳ ಗೇಮ್ ಆಗಿದೆ. ಈ ಗೇಮ್ ಕೇವಲ ಕಾಲ್ಪನಿಕ ಆಧಾರಿತವಾಗಿದ್ದು, ಯಾರ ಮನಸ್ಸಿಗೂ ಧಕ್ಕೆ ತರುವ ಉದ್ದೇಶಹೊಂದಿಲ್ಲ. ಕೇವಲ ಮನರಂಜನೆಗೆ ಮಾತ್ರವೇ ಸೀಮಿತ ಎಂದು ಕಂಪನಿ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...