alex Certify ಆತ್ಮಹತ್ಯೆ ತಪ್ಪಿಸಲು ಹಾಸ್ಟೆಲ್ ರೂಂ ​ಗಳಿಂದ ಸೀಲಿಂಗ್​ ಫ್ಯಾನ್​ ಎತ್ತಂಗಡಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆತ್ಮಹತ್ಯೆ ತಪ್ಪಿಸಲು ಹಾಸ್ಟೆಲ್ ರೂಂ ​ಗಳಿಂದ ಸೀಲಿಂಗ್​ ಫ್ಯಾನ್​ ಎತ್ತಂಗಡಿ…!

ಕ್ಯಾಂಪಸ್​ಗಳಲ್ಲಿ ನಡೆಯುವ ಆತ್ಮಹತ್ಯೆಗಳನ್ನು ತಡೆಯುವ ಸಲುವಾಗಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಅಧಿಕಾರಿಗಳು ಹಾಸ್ಟೆಲ್​ಗಳ ಕೊಠಡಿಗಳಲ್ಲಿ ಅಳವಡಿಸಿದ್ದ ಸೀಲಿಂಗ್​ ಫ್ಯಾನ್​ಗಳನ್ನು ತೆಗೆಯುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಇಲ್ಲಿ ಆರು ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಹಾಸ್ಟೆಲ್​ ಕೊಠಡಿಗಳಲ್ಲಿನ ಸೀಲಿಂಗ್​ ಫ್ಯಾನ್​ಗಳನ್ನು ತೆಗೆದು ವಾಲ್​ ಮೌಂಟೆಂಡ್​ ಫ್ಯಾನ್​ಗಳನ್ನು ಅಳವಡಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿಗಳ ಕೌನ್ಸಿಲ್​​ನ ಚೇರ್​ಮನ್​ಗೆ ವಿದ್ಯಾರ್ಥಿಗಳು ಬರೆದ ಆಂತರಿಕ ಇ ಮೇಲ್​ನಲ್ಲಿ ಸೀಲಿಂಗ್​ ಫ್ಯಾನ್​ ಬದಲು ವಾಲ್​ಮೌಂಟೆಡ್​ ಫ್ಯಾನ್​ಗಳನ್ನು ಅಳವಡಿಸುವ ಬಗ್ಗೆ ಹೇಳಿದ್ದಾರೆ.

ಮುಂದಿನ 15 ದಿನಗಳಲ್ಲಿ ಎಲ್ಲಾ ಕೊಠಡಿಗಳ ಫ್ಯಾನುಗಳನ್ನು ಬದಲಾಯಿಸಲಾಗುತ್ತದೆ ಎಂದು ಇಲ್ಲಿನ ಕೆಲಸಗಾರರು ಹೇಳಿದ್ದಾರೆ. ಹಾಸ್ಟೆಲ್​ಗಳಲ್ಲಿ ಆತ್ಮಹತ್ಯೆಯನ್ನು ತಡೆಯುವ ಉದ್ದೇಶದಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಈ ಸಂಬಂಧ ನಡೆಸಲಾದ ಸಮೀಕ್ಷೆಯಲ್ಲಿ 89 ಪ್ರತಿಶತ ವಿದ್ಯಾರ್ಥಿಗಳು ಸೀಲಿಂಗ್​ ಫ್ಯಾನ್​ಗಳನ್ನು ತೆಗೆದು ಹಾಕುತ್ತಿರುವುದರ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನುಳಿದ ವಿದ್ಯಾರ್ಥಿಗಳು ಈ ವಿಚಾರದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಯಾವ ಫ್ಯಾನ್ ಇದ್ದರೂ ಓಕೆ ಎಂದಿದ್ದಾರೆ.

ಇನ್ನು 85 ಪ್ರತಿಶತ ವಿದ್ಯಾರ್ಥಿಗಳು ಸೀಲಿಂಗ್ ಫ್ಯಾನ್​ಗಳನ್ನು ತೆಗೆದು ಹಾಕುವುದರಿಂದ ಆತ್ಮಹತ್ಯೆಯನ್ನು ಹತೋಟಿಗೆ ತರಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಹೊರ ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...