alex Certify ಜಗತ್ಪ್ರಸಿದ್ಧ ಪುರಿ ಜಗನ್ನಾಥ ದೇಗುಲ ಇಂದಿನಿಂದ ಭಕ್ತರ ದರ್ಶನಕ್ಕೆ ಮುಕ್ತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಗತ್ಪ್ರಸಿದ್ಧ ಪುರಿ ಜಗನ್ನಾಥ ದೇಗುಲ ಇಂದಿನಿಂದ ಭಕ್ತರ ದರ್ಶನಕ್ಕೆ ಮುಕ್ತ

ಕೊರೊನಾ ಮೂರನೆ ಅಲೆಯ ಆತಂಕಗಳ ನಡುವೆಯೂ ಓಡಿಶಾ ಸರ್ಕಾರವು ದೇಗುಲ ಸೇರಿದಂತೆ ವಿವಿಧ ಧಾರ್ಮಿಕ ಸಂಸ್ಥೆಗಳಲ್ಲಿ ಕೋವಿಡ್​ ನಿಯಮಗಳನ್ನು ಸಡಿಲಗೊಳಿಸುತ್ತಿದೆ. ಕೋವಿಡ್​​ ಮುಂಜಾಗ್ರತಾ ಕ್ರಮಗಳ ಜೊತೆಗೆ ಭಕ್ತರಿಗೆ ದೇವರ ದರ್ಶನಕ್ಕೆ ಅನುಮತಿ ನೀಡಿದೆ.

ಇಂದಿನಿಂದ ಜಗತ್ಪ್ರಸಿದ್ಧ ಪುರಿ ಜಗನ್ನಾಥ ದೇಗುಲ ಕೂಡ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ. ವಾರದ ಮೊದಲ ಐದು ದಿನಗಳು ದೇಗುಲವು ಭಕ್ತರ ದರ್ಶನಕ್ಕೆ ತೆರಯಲಿದೆ. ಜಗನ್ನಾಥ ದೇವಸ್ಥಾನವನ್ನು ನಾಲ್ಕು ತಿಂಗಳ ಅಂತರದ ನಂತರ ಆಗಸ್ಟ್ 23 ರಂದು ಭಕ್ತರಿಗಾಗಿ ತೆರೆಯಲಾಯಿತು.

ಕೋವಿಡ್​​ ಭಯವನ್ನೂ ಗಮನದಲ್ಲಿಟ್ಟುಕೊಂಡು ಭಕ್ತರಿಗೆ ಕೋವಿಡ್​ ಲಸಿಕೆ ಪಡೆದ ಅಂತಿಮ ಪ್ರಮಾಣ ಪತ್ರವನ್ನು ನೀಡುವಂತೆ ಅಥವಾ ಕೋವಿಡ್​ ನೆಗೆಟಿವ್​ ವರದಿಯನ್ನು ಕೊಡುವಂತೆ ಸೂಚನೆ ನೀಡಲಾಗಿದೆ. 96 ಗಂಟೆಯ ಒಳಗಾಗಿ ಮಾಡಲಾದ ಕೋವಿಡ್ ಪರೀಕ್ಷಾ ವರದಿಗೆ ಮಾತ್ರ ಮಾನ್ಯತೆ ಇದೆ.

ದೇಗುಲಕ್ಕೆ ಭೇಟಿ ನೀಡುವ ಎಲ್ಲಾ ಭಕ್ತರಿಗೆ ಫೋಟೋ ಐಡಿ ಕಾರ್ಡ್​ ಅಂದರೆ ಆಧಾರ್​ ಅಥವಾ ವೋಟರ್​ ಐಡಿ ನೀಡಿವುದು ಕಡ್ಡಾಯವಾಗಿದೆ. ಸಿಂಘದ್ವಾರದಲ್ಲಿ ಎಂಟ್ರಿ ಪಡೆದ ಭಕ್ತರು ಉತ್ತರದ್ವಾರದಲ್ಲಿ ಹೊರ ಬೀಳಲಿದ್ದಾರೆ.

ದರ್ಶನ ವೇಳೆಯಲ್ಲಿ ಮಾಸ್ಕ್​ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ದೇಗುಲಕ್ಕೆ ಎಂಟ್ರಿ ನೀಡುವ ಮುನ್ನ ಕೈಗಳನ್ನು ಸ್ಯಾನಿಟೈಸ್​ ಮಾಡುವುದು ಕಡ್ಡಾಯವಾಗಿದೆ.

— ANI (@ANI) September 18, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...