alex Certify ಬಿಜೆಪಿ ನಾಯಕನ ಮೇಲೆ ಕೈಮಾಡಿದ ಬಿಜೆಡಿ ಶಾಸಕ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿ ನಾಯಕನ ಮೇಲೆ ಕೈಮಾಡಿದ ಬಿಜೆಡಿ ಶಾಸಕ ಅರೆಸ್ಟ್

ಬಿಜೆಪಿ ನಾಯಕರೊಬ್ಬರ ಮೇಲೆ ಕೈ ಮಾಡಿದ ಆಪಾದನೆ ಮೇಲೆ ಒಡಿಶಾದ ಚಿಲಿಕಾ ಕ್ಷೇತ್ರದ ಬಿಜೆಡಿ ಶಾಸಕ ಪ್ರಶಾಂತಾ ಜಗದೇವ್‌ರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲು ಖುರ್ದಾ ಎಡಿಜೆ-1 ಕೋರ್ಟ್ ಆದೇಶ ನೀಡಿದೆ. ಅಕ್ಟೋಬರ್‌ 5ರಂದು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನನ್ನು ತಿರಸ್ಕರಿಸಿದ ಒಡಿಶಾ ಹೈಕೋರ್ಟ್ ಕೆಳಹಂತದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಆದೇಶಿಸಿತ್ತು.

ಅಧಿಕ ತೂಕದಿಂದ ಮುಜುಗರಕ್ಕೀಡಾಗ್ತಿದ್ದೀರಾ….? ಬೊಜ್ಜನ್ನು ಹೀಗೆ ಕಡಿಮೆ ಮಾಡಿ

ಖುರ್ದಾ ಜಿಲ್ಲೆಯ ಬಾಲುಗಾಂವ್‌ನಲ್ಲಿ ಬಿಜೆಪಿ ನಾಯಕರೊಬ್ಬರಿಗೆ ಸಾರ್ವಜನಿಕವಾಗಿ ಕೈ ಮಾಡಿದ್ದ ಜಗದೇವ್‌‌ರನ್ನು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪಕ್ಷದಿಂದ ಉಚ್ಛಾಟಿಸಿದ್ದರು. ಇದರೊಂದಿಗೆ ಖುರ್ದಾರ ಜಿಲ್ಲೆಯ ಯೋಜನಾ ಸಮಿತಿಯ ಸದಸ್ಯತ್ವದಿಂದಲೂ ಜಗದೇವ್‌ರನ್ನು ಪಟ್ನಾಯಕ್‌ ಕಿತ್ತೊಗೆದಿದ್ದರು.

ಬಾಲುಗಾಂವ್‌ ನಗರದ ಎನ್‌ಎಸಿ ಕಚೇರಿ ಬಳಿ ನಗರ ಬಿಜೆಪಿ ಅಧ್ಯಕ್ಷ ನಿರಂಜನ್ ಸೇಠಿ ಮೇಲೆ ಕೈ ಮಾಡಿದ್ದ ಜಗದೇವ್‌ ಅವಾಚ್ಯ ಪದಗಳ ಪ್ರಯೋಗದೊಂದಿಗೆ ಸ್ಥಳದಲ್ಲಿದ್ದ ಪತ್ರಕರ್ತರೊಬ್ಬರ ಕೈಲಿದ್ದ ಮೊಬೈಲ್ ಕಿತ್ತುಕೊಂಡಿದ್ದರು. ಘಟನೆ ಸಂಬಂಧ ಬಿಜೆಪಿ ನಾಯಕ ಪೊಲೀಸರಿಗೆ ದೂರು ಸಲ್ಲಿಸಿದ್ದರು

ಉಗುರಿನ ಬಣ್ಣ ಕಾಪಾಡಿಕೊಳ್ಳಲು ಇಲ್ಲಿದೆ ‘ಟಿಪ್ಸ್’.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...